Politics News

[cmsmasters_row][cmsmasters_column data_width=”1/1″][cmsmasters_text]

ಡಿ.ಕೆ ಶಿವಕುಮಾರ್ ಇಂದಲ್ಲ ನಾಳೆ ಮತ್ತೆ ಜೈಲಿಗೆ ಹೋಗುತ್ತಾರೆಕೆ.ಎಸ್ ಈಶ್ವರಪ್ಪ

ಶಿವಮೊಗ್ಗ : ಡಿ.ಕೆ ಶಿವಕುಮಾರ್  ಅಕ್ರಮ ಹಣ ಸಂಪಾದನೆ ಮಾಡಿರೋದು ಇಡೀ ದೇಶಕ್ಕೆ ಗೊತ್ತು. ಅಕ್ರಮ ಹಣ ಸಂಗ್ರಹದ ಆರೋಪದ ಮೇಲೆ ಜೈಲು ಸೇರಿದ್ದರು. ಈಗ ಬೇಲ್ ಮೇಲೆ ಹೊರಗಿದ್ದಾರೆ. ಇಂದಲ್ಲ ನಾಳೆ ಮತ್ತೆ ಜೈಲಿಗೆ ಹೋಗುತ್ತಾರೆ ಡಿಕೆಶಿ ವಿರುದ್ಧ ಹರಿಹಾಯ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ

ಇಂದು ಬಿ..ಜೆ. ಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್ ಈಶ್ವರಪ್ಪ ಡಿ.ಕೆ ಶಿವಕುಮಾರ್ ಜೈಲಿನಿಂದ ಬಿಡುಗಡೆಯಾದಾಗ ಬೆಂಗಳೂರಿನಿಂದ ಮೆರವಣಿಗೆಯಲ್ಲಿ ಬಂದಿದ್ದರು, ಅದನ್ನ ನೋಡಿ ಕೇಸ್ ಖುಲಾಸೆ ಆಗಿದೆ ಅಂದುಕೊಂಡಿದ್ದೆ. ಅವನಷ್ಟು ಬಂಡತನ ನಾನು ಕಂಡಿಲ್ಲ, ಕೇಸ್ ನಡೆಯುತ್ತಿದೆ, ಅವರ ಮೇಲಿನ ವಿಚಾರಣೆ ಮುಂದುವರೆದಿದೆ . ಇಂದಲ್ಲ ನಾಳೆ ಮತ್ತೆ  ಜೈಲಿಗೆ ಹೋಗುತ್ತಾರೆ ಎಂದು ಏಕವಚನದಲ್ಲಿ ಗುಡುಗಿದ್ದಾರೆ.

ಕಾಂಗ್ರೆಸ್ ಸರ್ಕಾರ ಹಿಂದೂಗಳ ವಿರುದ್ಧ ಏನೆಲ್ಲಾ ಷಡ್ಯಂತ್ರ  ಮಾಡಬೇಕು ಅದನ್ನೆಲ್ಲ ಮಾಡುತ್ತಿದೆ. ರಾಜ್ಯ ಸರ್ಕಾರ ಅರಿಶಿಣ ಕುಂಕುಮ ಬಳಸಬಾರದೆಂದು ಆದೇಶ ಹೊರಡಿಸಿದೆ. ಹಿಂದುಗಳ ಕಾರ್ಯಕ್ರಮಕ್ಕೆ ಹಬ್ಬಗಳಿಗೆ ಷರತ್ತು ಹಾಕುತ್ತಿದೆ. ನಾವು ಏಕೆ ಅವರ ಸರ್ಕಾರವನ್ನು ಬೀಳಿಸಬಾರದು? ನಾವು ಏಕೆ ಪ್ರಯತ್ನಪಡಬಾರದು  ಎಂದು ಪ್ರಶ್ನೆಸಿದ್ದಾರೆ

 

ವರದಿ : ಲಿಂಗರಾಜ್ ಗಾಡಿಕೊಪ್ಪ

[/cmsmasters_text][/cmsmasters_column][/cmsmasters_row]