ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಗೆ ತಂಡಗಳ ಆಹ್ವಾನ ! ಯಾರೆಲ್ಲಾ ಭಾಗವಹಿಸಿಬಹುದು ? ಸ್ಪರ್ಧೆಗಳು ಏನೇನು ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
ಶಿವಮೊಗ್ಗ : ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮ ಸದ್ಯದಲ್ಲಿ ನಡೆಯಲಿದ್ದು. ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪೂರ್ವಭಾವಿಯಾಗಿ ಜಿಲ್ಲಾ ತಂಡವನ್ನು ಕಳುಹಿಸಿಕೊಡಲು ಶಿವಮೊಗ್ಗ ಜಿಲ್ಲಾ ಮಟ್ಟದ ಯುವಜನೋತ್ಸವದ ಆಯ್ಕೆ ಸ್ಪರ್ಧೆಗಳನ್ನು ದಿನಾಂಕ:21-11-2023 ರಂದು ಮಂಗಳವಾರ ಬೆಳಗ್ಗೆ 10.00 ಘಂಟೆಗೆ ಕುವೆಂಪು ರಂಗಮಂದಿರ, ಶಿವಮೊಗ್ಗ ಇಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದೆ.
ರಾಜ್ಯ ಮಟ್ಟದ ಯುವಜನೋತ್ಸವ ಸ್ಪರ್ಧೆಗೆ ಶಿವಮೊಗ್ಗ ಜಿಲ್ಲೆಯ ತಂಡಗಳನ್ನು ಕಳುಹಿಸಿಕೊಡಬೇಕಾಗಿರುವುದರಿಂದ, ಶಿವಮೊಗ್ಗ ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಗಳ ಆಯ್ಕೆಯನ್ನು ಕೆಳಕಂಡ ವಿಭಾಗಗಳಲ್ಲಿ ನಡೆಸಲಾಗುವುದು. ಇದರಲ್ಲಿ ಭಾಗವಹಿಸುವ ಯುವಕ / ಯುವತಿಯರು 15 ರಿಂದ 29 ವರ್ಷ ವಯೋಮಿತಿ ಒಳಪಟ್ಟಿರಬೇಕು. ನೊಂದಾವಣೆ ಸಮಯದಲ್ಲಿ ವಯಸ್ಸಿನ ದೃಢೀಕರಣಕ್ಕೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ ಅಂಕಪಟ್ಟಿ/ಜನನ ಪ್ರಮಾಣ ಪತ್ರ/ಆಧಾರ ಕಾರ್ಡ ತರುವುದು ಕಡ್ಡಾಯವಾಗಿರುತ್ತದೆ. ಗ್ರಾಮೀಣ ಪ್ರದೇಶದವರು, ನಗರ ಪ್ರದೇಶದವರು, ಕಾಲೇಜಿನ ಯುವಕ / ಯುವತಿಯರು, ಯುವಕ ಯುವತಿ ಸಂಘದ ಸದಸ್ಯರು ಭಾಗವಹಿಸಬಹುದಾಗಿರುತ್ತದೆ.
ಭಾಗವಹಿಸುವ ಸ್ಪರ್ಧಾಳುಗಳು ಅವಶ್ಯಕ ವೇಷ ಭೂಷಣಗಳನ್ನು ಹಾಗೂ ಸಂಗೀತ ಉಪಕರಣಗಳನ್ನು ಸ್ಪರ್ಧಾಳುಗಳೇ ತರತಕ್ಕದ್ದು, ಭಾಗವಹಿಸುವ ಸ್ಪರ್ಧಾಳುಗಳಿಗೆ ಮಧ್ಯಾಹ್ನ ಲಘು ಉಪಹಾರವನ್ನು ಹಾಗೂ 7 ತಾಲ್ಲೂಕಿನಿಂದ ಭಾಗವಹಿಸುವ ಸ್ಪರ್ಧಾಳುಗಳಿಗೆ ಬಂದು ಹೋಗುವ ಸಾಮಾನ್ಯ ಪ್ರಯಾಣದರ ನೀಡಲಾಗುವುದು.
ಸ್ಪರ್ಧೆಗಳ ವಿವರ:
- ಜನಪದ ನೃತ್ಯ (ತಂಡ)- ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ (ಕ್ಯಾಸೆಟ್, ಪೆನ್‌ಡ್ರೈನ್ ಹಾಗೂ ಸಿಡಿ ಹಾಡುಗಳಿಗೆ ಅವಕಾಶವಿರುವುದಿಲ್ಲ) 10 ಜನ, 15 ನಿಮಿಷ
- ಜನಪದ ಗೀತೆ (ತಂಡ)- ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ, 10 ಜನ, 7 ನಿಮಿಷ
- ಜನಪದ ನೃತ್ಯ (ವೈಯಕ್ತಿಕ) – ಕನ್ನಡ /ಆಂಗ್ಲ/ಹಿಂದಿ ಭಾಷೆಯಲ್ಲಿ ಒಬ್ಬರು 7 ನಿಮಿಷ
- ಜನಪದ ಗೀತೆ (ವೈಯಕ್ತಿಕ) – ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ಒಬ್ಬರು, 7ನಿಮಿಷ
- ಕಥೆ ಬರೆಯುವುದು (ವೈಯಕ್ತಿಕ) ಸ್ಟೋರಿ ರೈಟಿಂಗ್ (1000 ಪದಗಳಿಗೆ ಮೀರದಂತೆ) ಕನ್ನಡ/ಆಂಗ್ಲ/ಹಿಂದಿ ಭಾಷೆಯಲ್ಲಿ ವಿಷಯವು ಆಕ್ರಮಣಕಾರಿಯಾಗಿರಬಾರದು. ಈಗಾಗಲೇ ಪ್ರಕಟವಾಗಿರಬಾರದು, ಸ್ಪಷ್ಟವಾಗಿರಬೇಕು, ಜಾತಿ, ಪಂಥ ಧರ್ಮವರ್ಣ ಜನಾಂಗವನ್ನು ಒಳಗೊಂಡಿರಬಾರದು ಒಳಗೊಂಡಿರಬಾರದು. ಹಾಗೂ ಸೂಕ್ತವಲ್ಲದ ವಿಷಯ ಒಳಗೊಂಡಿರಬಾರದು. ಒಬ್ಬರು 60 ನಿಮಿಷ
- ಪೋಸ್ಟರ್ ಮೇಕಿಂಗ್ (ಬಿತ್ತಿಪತ್ರ ತಯಾರಿಕೆ) (ವೈಯಕ್ತಿಕ) ಪೋಸ್ಟರ್ A3 size le 11.7″ • 16.5″ – ಕನ್ನಡ /ಆಂಗ್ಲ/ಹಿಂದಿ ಭಾಷೆಯಲ್ಲಿ ಬಿತ್ತಿಪತ್ರವು ಯಾವುದೇ ಸಂಸ್ಥೆಯನ್ನು ಅಥವಾ ಬ್ರಾಂಡ್ ಹೆಸರು ಪ್ರತಿನಿಧಿಸುತ್ತಿರಬಾರದು ಸ್ಪರ್ಧಿಗಳು ತಾವು ಸಲ್ಲಿಸುವ ಬಿತ್ತಿಪತ್ರವು 20-30 ಪದಗಳೊಳಗೆ ಇರುವ ಶೀರ್ಷಿಕೆ ಒಳಗೊಂಡಿರಬೇಕು ಒಬ್ಬರು 90 ನಿಮಿಷ
- Declamation (ಘೋಷಣೆ) ಭಾಷೆ: ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಇರಬೇಕು (ರಾಷ್ಟ್ರ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು) ಕನ್ನಡ ಭಾಷೆಯನ್ನು ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದವರೆಗೆ ಮಾತ್ರ ಸೀಮಿತಿಗೊಳಿಸಿದೆ. ವಿಷಯ:- “ಸದೃಢ ಯುವಜನತೆಯಿಂದ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ” ತೀರ್ಮಾನವು: ಭಾಷಣದ ನಿಖರತೆ, ಹರಿವು, ವಿಷಯಕ್ಕೆ ಸಂಬಂಧಿಸಿದಂತೆ ಮಂಡಿಸುವ Ponits ಗಳು, ಶಬ್ದ ಪದಗಳು ಪುನರಾವರ್ತನೆ ಆಗದಿರುವುದು. ವಿಷಯದ ಬಗ್ಗೆ ಅರಿವು ಮತ್ತು ಆತ್ಮ ವಿಶ್ವಾಸ ಹೊಂದಿರುವುದರ ಮೇಲೆ ಅವಲಂಬಿಸಿರುತ್ತದೆ. ಒಬ್ಬರು 3 ನಿಮಿಷ
- ಛಾಯಾಚಿತ್ರಣ (ವೈಯಕ್ತಿಕ) Photography 2 (Photographs in electronic mode) ಕೆಳಗಿನ ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು. ಕ್ಯಾಮೆರಾ ಮತ್ತು ಮೊಬೈಲ್ ನಿಂದ ತೆಗೆದ ಚಿತ್ರಗಳನ್ನು ಪರಿಗಣಿಸಬಹುದಾಗಿದೆ. (ಮೊಬೈಲ್ ಹಾಗೂ ಕ್ಯಾಮರಾದಲ್ಲಿ ತೆಗೆದ ಚಿತ್ರವಾಗಿದ್ದು, ಕೆಳಭಾಗದಲ್ಲಿ ಚಿತ್ರ ತೆಗೆದ ದಿನಾಂಕ, ಸ್ಥಳ ಮತ್ತು ಸಮಯ ಕಡ್ಡಾಯವಾಗಿ ನಮೂದಾಗಿರಬೇಕು) ಒಬ್ಬರು
-
- ಪ್ರಗತಿಶೀಲ ಭಾರತ
- ಆತ್ಮನಿರ್ಭರ
- ಯೋಗ /ಕ್ರೀಡೆ
- ಫಿಟ್ನೆಸ್ ಗಾಗಿ ದೈಹಿಕ ಚಟುವಟಿಕೆ
- ಪ್ರಕೃತಿ ದೃಶ್ಯಗಳು
ಸ್ಪರ್ಧೆಗಳು ತಾವು ಸಲ್ಲಿಸಿರುವ ಬಿತ್ತಿ ಪತ್ರವು 20 -30 ಪದಗಳೋಳಗೆ ಇರುವ ಶೀರ್ಷಿಕೆ ಒಳಗೊಂಡಿರಬೇಕು.
ಮೇಲ್ಕಂಡ ಆಯ್ಕೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳು, ದಿನಾಂಕ:21-11-2023 ರಂದು ಮಂಗಳವಾರ ಬೆಳಗ್ಗೆ 10.00 ಘಂಟೆಗೆ ಕುವೆಂಪು ರಂಗಮಂದಿರ, ಶಿವಮೊಗ್ಗ ಇಲ್ಲಿ ವರದಿ ಮಾಡಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಕ್ರೀಡಾಂಗಣ, ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 90089-49847 ಮುಖಾಂತರ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿರುತ್ತದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ