ಅರಣ್ಯ ವೀಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಕೆ ಆರಂಭ ! ಅರ್ಜಿ ಸಲ್ಲಿಸುವ ವಿಧಾನ ಹೇಗೆ ?

ಅರಣ್ಯ ವೀಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಕೆ ಆರಂಭ ! ಅರ್ಜಿ ಸಲ್ಲಿಸುವ ವಿಧಾನ ಹೇಗೆ ?

ಶಿವಮೊಗ್ಗ :ಈ ಹಿಂದೆ  ಅರಣ್ಯ ಇಲಾಖೆಯಿಂದ ನೇಮಕಾತಿ ಅರ್ಜಿಯನ್ನ ಹೊರಡಿಸಿದ್ದು, ಈಗ ಅರಣ್ಯ ವೀಕ್ಷಕರೇ ಹುದ್ದೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ರಾಜ್ಯ ಅರಣ್ಯ ಇಲಾಖೆಯ ಶಿವಮೊಗ್ಗ ಅರಣ್ಯ ವೃತ್ತದಲ್ಲಿ ಖಾಲಿ ಇರುವ 30 ಗ್ರೂಪ್‌ ಡಿ ಅರಣ್ಯ ವೀಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ

ಈ ನೇರ ನೇಮಕಾತಿ ನೋಟಿಫಿಕೇಶನ್‌ ಅನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ https://aranya.gov.in ಮುಖ ಪುಟದ ಕೆಳಭಾಗದಲ್ಲಿ ಇರುವ ನೇಮಕಾತಿ ಶೀರ್ಷಿಕೆಯಡಿ ಪ್ರಕಟಿಸಲಿದ್ದು, ಚೆಕ್‌ ಮಾಡಿಕೊಳ್ಳಬಹುದು. ಈ ವೆಬ್‌ಪುಟದಲ್ಲಿಯೇ ಆನ್‌ಲೈನ್‌ ಅರ್ಜಿ ಲಿಂಕ್‌ ನೀಡಲಿದ್ದು, ಆಸಕ್ತರು ಭರ್ತಿ ಮಾಡಬಹುದು. ಈ ವಿಧಾನವನ್ನು ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಇರುವುದಿಲ್ಲ.

ಜನ್ಮ ದಿನಾಂಕ ದೃಢೀಕರಿಸುವ ಪ್ರಮಾಣ ಪತ್ರ, ನಿಗಧಿತ ಶೈಕ್ಷಣಿಕ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು ಹಾಗೂ ನಿಗಧಿತ ಜಾತಿ / ಪ್ರವರ್ಗ / ಗ್ರಾಮೀಣ / ಕನ್ನಡ ಮಾಧ್ಯಮ / ಯೋಜನಾ ನಿರಾಶ್ರಿತ / ಸೈನಿಕ ಸೇವೆ / ತೃತೀಯ ಲಿಂಗ ಅಭ್ಯರ್ಥಿಗಳು ಇತ್ಯಾದಿ ದೃಢೀಕರಣ ಪ್ರಮಾಣ ಪತ್ರಗಳನ್ನು ಆನ್‌ಲೈನ್‌ ಅರ್ಜಿ ವೇಳೆ ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡಬೇಕು.

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಪ್ರಾರಂಭಿಕ ದಿನಾಂಕ : 27-09-2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 26-10-2023

ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 31-10-2023

ಅರ್ಜಿ ಶುಲ್ಕ ಈ ಕೆಳಗಿನಂತೆ ನಿಗಧಿಪಡಿಸಲಾಗಿದೆ.

ಸಾಮಾನ್ಯ ಅರ್ಹತೆ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.200 (20 ರೂ ಸೇವಾ ಶುಲ್ಕ)

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.100 (20 ರೂ ಸೇವಾ ಶುಲ್ಕ)

ಆಯ್ಕೆ ವಿಧಾನ

ಅರ್ಜಿ ಸಲ್ಲಿಸಿದವರ ವಿದ್ಯಾರ್ಹತೆಯ ಅಂಕಗಳ ಆಧಾರದಲ್ಲಿ ಹುದ್ದೆಗಳಿಗೆ ಅನುಗುಣವಾಗಿ 1:20 ಅಭ್ಯರ್ಥಿಗಳಿಗೆ ದೈಹಿಕ ತಾಳ್ವಿಕೆ ಪರೀಕ್ಷೆ, ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ ನಡೆಸಿ ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗುವುದು. ಇವರು ಮೂಲ ದಾಖಲೆಗಳ ಪರಿಶೀಲನೆ, ಮೆಡಿಕಲ್ ಟೆಸ್ಟ್‌ಗೆ ಪಾಲ್ಗೊಳ್ಳಬೇಕು. ನಂತರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.

ವರದಿ : ಲಿಂಗರಾಜ್ ಗಾಡಿಕೊಪ್ಪ