ಶಿವಮೊಗ್ಗ : ಶಿವಮೊಗ್ಗ ವಿಮಾನ ನಿಲ್ದಾಣ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹೊರ ರಾಜ್ಯಗಳಿಗೂ ವಿಮಾನಸೇವೆ ಆರಂಭವಾಗಿದ್ದು. ಹೈದರಾಬಾದ್ ಸೇರಿದಂತೆ ಗೋವಾ ಮತ್ತು ತಿರುಪತಿಗೆ ವಿಮಾನ ಹಾರಾಟ ಆರಂಭವಾಗಿದೆ.
ಇಂದು ಬೆಳಗ್ಗೆ 9:35 ಗಂಟೆಗೆ ಹೈದರಾಬಾದ್ ನಿಂದ ಹೊರಟ ಸ್ಟಾರ್ ಏರ್ ಲೈನ್ ವಿಮಾನ 10:35 ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಸ್ಟಾರ್ ಏರ್ ಲೈನ್ ನಲ್ಲಿ ಬಂದಿಳಿದ 83 ಪ್ರಯಾಣಿಕರನ್ನು ಸಂಸದ ಬಿ.ವೈ ರಾಘವೇಂದ್ರ ಹೂ ಗುಚ್ಛ ನೀಡಿ ಸ್ವಾಗತಿಸಿದ್ದಾರೆ. ಹೈದರಬಾದ್ ಗೆ ಮಂಗಳವಾರ, ಬುಧವಾರ ಗುರುವಾರ ಹಾಗೂ ಶನಿವಾರ ವಿಮಾನ ಸಂಚಾರದ ವ್ಯವಸ್ಥೆ ಇರಲಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಗೋವಾ ಮತ್ತು ತಿರುಪತಿಗೆವಿಮಾನ ಸಂಚಾರ ಆರಂಭವಾಗಿದ್ದು. ಶಿವಮೊಗ್ಗದಿಂದ ಗೋವಾಕ್ಕೆ ಮಂಗಳವಾರ, ಬುಧವಾರ, ಗುರುವಾರ ಹಾಗೂ ಶನಿವಾರ ಸ್ಟಾರ್ ಏರ್ ಲೈನ್ಸ್ ವಿಮಾನ ಸಂಚಾರವನ್ನು ನೀಡಲಿದ್ದು. ಶಿವಮೊಗ್ಗದಿಂದ 13:55ಕ್ಕೆ ವಿಮಾನ ಹೊರಟು 14:45 ಕ್ಕೆ ಗೋವಾ ತಲುಪಲಿದೆ.
ಶಿವಮೊಗ್ಗದಿಂದ ತಿರುಪತಿಗೆ ಮಂಗಳವಾರ, ಗುರುವಾರ ಹಾಗೂ ಶನಿವಾರ ವಿಮಾನ ಸಂಚಾರ ವ್ಯವಸ್ಥೆ ಇರಲಿದೆ
ಬೆಳಗ್ಗೆ 11 ಗಂಟೆಗೆ ಶಿವಮೊಗ್ಗದಿಂದ ಹೊರಡುವ ವಿಮಾನ ಮಧ್ಯಾಹ್ನ 12 ಗಂಟೆಗೆ ತಿರುಪತಿ ತಲುಪಲಿದೆ.
ಮೂರು ಕಡೆ ಪ್ರಯಾಣಿಸಲು ರೂ 1999 ನ್ನು ನಿಗದಿಪಡಿಸಲಾಗಿದ್ದು. ಗೋವಾ,ಹೈದರಾಬಾದ್, ತಿರುಪತಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ವರದಿ : ಲಿಂಗರಾಜ್ ಗಾಡಿಕೊಪ್
Leave a Reply