ಸ್ವದೇಶಿ ಮೇಳದ ವತಿಯಿಂದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಪ್ರಬಂಧಸ್ಪರ್ಧೆ ಆಯೋಜನೆ, ಯಾರ್ಯಾರು ಭಾಗವಹಿಸಬಹುದು? ವಿಷಯಗಳೇನು ? ಸೂಚನೆಗಳು ಏನು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
ಶಿವಮೊಗ್ಗ : ಶಿವಮೊಗ್ಗದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವದೇಶಿ ಜಾಗರಣ ಮಂಚ್ ಆಯೋಜಿಸಿರುವ ಬೃಹತ್ ಮಟ್ಟದ ಸ್ವದೇಶಿ ಮೇಳ ನಗರದ ಫ್ರೀಡಂ ಪಾರ್ಕ್ (ಚಂದ್ರಶೇಖರ್ ಅಜಾದ್ ಪಾರ್ಕ್ ಹಳೆ ಜೈಲು ಆವರಣ) ನಲ್ಲಿ ಡಿಸೆಂಬರ್ 6 ರಿಂದ 10 ರವರೆಗೆ ನಡೆಯಲಿದೆ
ಈ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.ಸ್ಪರ್ಧೆಯಲ್ಲಿ ಯಾರ್ಯಾರು ಭಾಗವಹಿಸಬಹುದು? ವಿಷಯಗಳೇನು ? ಸೂಚನೆಗಳು ಏನು?
ಚಿತ್ರಕಲಾ ಸ್ಪರ್ಧೆಯ ವಿಷಯ : ಸ್ವದೇಶಿ ಪರಿಕಲ್ಪನೆ (1 ರಿಂದ 10ನೆ ತರಗತಿ ವಿದ್ಯಾರ್ಥಿಗಳಿಗಾಗಿ ) ಚಿತ್ರಕಲಾ ಸ್ಪರ್ಧೆಯು 1 ರಿಂದ 10ನೆಯ ತರಗತಿಯ ವಿದ್ಯಾರ್ಥಿಗಳಿಗಾಗಿ ನಡೆಯಲಿದ್ದು , ಇದರಲ್ಲಿ ಮೂರು ವಿಭಾಗಗಳನ್ನಾಗಿ ವಿಂಗಡಿಸಿದ್ದಾರೆ, ಚಿತ್ರಕಲಾ ಸ್ಪರ್ಧೆಯನ್ನು, ಶಾಲಾ ಹಂತದಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳನ್ನಾಗಿ ಮಾಡಿ ಸ್ಪರ್ಧೆಯನ್ನು ನಡೆಸಲಾಗುತ್ತದೆ.
ಚಿತ್ರಕಲಾ ಸ್ಪರ್ಧೆಗೆ ಬೇಕಾಗುವ ಎಲ್ಲಾ ಪರಿಕರಗಳನ್ನು ವಿದ್ಯಾರ್ಥಿಗಳೇ ತರತಕ್ಕದ್ದು
ಪ್ರತಿ ವಿಭಾಗದಲ್ಲಿ ಮೂವರು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು. ಶಾಲಾ ಹಂತದಲ್ಲಿ ವಿಜೇತರಾದ ಪ್ರಥಮ, ದ್ವಿತೀಯ, ತೃತೀಯ ವಿಜೇತರನ್ನು ಜಿಲ್ಲಾ ಹಂತಕ್ಕೆ ಆಯ್ಕೆ ಮಾಡಿ ಜಿಲ್ಲಾ ಹಂತದಲ್ಲಿ ಮೂರು ವಿಜೇತರಿಗೆ ಪ್ರಥಮ ದ್ವಿತೀಯ, ತೃತೀಯ ಮತ್ತು ಎರಡು ಸಮಾಧಾನಕರ ಬಹುಮಾನವನ್ನು ಸ್ವದೇಶಿ ಮೇಳದ ಸಮಾರಂಭದ ವೇದಿಕೆಯಲ್ಲಿ ನೀಡಿ ಗೌರವಿಸಲಾಗುವುದು
ಪ್ರಬಂಧ ಸ್ಪರ್ಧೆಯ ಎರಡು ವಿಭಾಗಗಳಾಗಿ ವಿಂಗಡಿಸಿದ್ದು.
ಪದವಿಪೂರ್ವ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸ್ವದೇಶಿ ಏಕೆ? ಹೇಗೆ? ಎಂಬ ವಿಷಯವನ್ನು ಕೊಡಲಾಗಿದ್ದು. ಪದವಿ ವಿದ್ಯಾರ್ಥಿಗಳಿಗೆ ಸ್ವದೇಶಿ ಮತ್ತು ಜಾಗತೀಕರಣ ಎಂಬ ವಿಷಯವನ್ನು ಕೊಡಲಾಗಿದೆ.
ಸ್ವದೇಶಿ ಏಕೆ? ಹೇಗೆ? (ಪದವಿಪೂರ್ವ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ)
ಸ್ವದೇಶಿ ಮತ್ತು ಜಾಗತೀಕರಣ ( ಪದವಿ ವಿದ್ಯಾರ್ಥಿಗಳಿಗಾಗಿ )
ಪ್ರಬಂಧ ಸ್ಪರ್ಧೆ:
ಪ್ರಬಂಧವು 400 ಪದಗಳು ಮೀರದಂತೆ ಬರೆಯತಕ್ಕದ್ದು.
ಪ್ರಬಂಧವು ಕನ್ನಡ ಭಾಷೆಯಲ್ಲಿರಬೇಕು
ಈಗಾಗಲೇ ಪ್ರಕಟವಾಗಿರಬಾರದು, ಓದಲು ಸ್ಪಷ್ಟವಾಗಿರಬೇಕು
ಹೆಚ್ಚಿನ ಮಾಹಿತಿಗಾಗಿ :
ಜಗದೀಶ್ ಶಿಪ್ರಾ : 77958 29207
ಲಿಂಗರಾಜು, ಡಿ : 91649 02273
ಮುರಳಿಧರ್ ರಾವ್ ಕುಲಕರ್ಣಿ : 97429 33443
ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ವರದಿ:ಲಿಂಗರಾಜ್ ಗಾಡಿಕೊಪ್ಪ
Leave a Reply