ನೀರು ಮತ್ತು ಮೇವಿಗೆ ಕೊರತೆಯಾಗದಂತೆ ಗಮನ ಹರಿಸಲಾಗುವುದು, ನಗರ ಪ್ರದೇಶದಲ್ಲಿ 24 ಗಂಟೆಯು ವಿದ್ಯುತ್ ಪೂರೈಕೆ ಯಾಗುತ್ತಿದೆ, ಶೆಡ್ ಡೌನ್, ಪವರ್ ಕಟ್ ಇಲ್ಲಾ – ಮಧು ಬಂಗಾರಪ್ಪ
ಶಿವಮೊಗ್ಗ : ರಾಜ್ಯ ಸರ್ಕಾರ ನೀರು, ಮೇವು, ವಿದ್ಯುತ್, ಕೊರತೆ ಯಾಗದಂತೆ ಗಮನ ಹರಿಸುತ್ತಿದೆ,ನಗರ ಪ್ರದೇಶದಲ್ಲಿ 24 ಗಂಟೆಯು ವಿದ್ಯುತ್ ಪೂರೈಕೆ ಯಾಗುತ್ತಿದೆ, ಶೆಡ್ ಡೌನ್, ಪವರ್ ಕಟ್ ಇಲ್ಲಾ,
ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಮತ್ತು ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ರಾಜ್ಯದಲ್ಲಿ ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಸನ್ನದ್ದವಾಗಿದೆ, ಶಿವಮೊಗ್ಗ ಜಿಲ್ಲೆಯ ಏಳು ತಾಲೂಕುಗಳಲ್ಲಿ ಐದು ತಾಲೂಕುಗಳ ಬರ ನಿರ್ವಹಣೆಯ ಸಭೆಯನ್ನು ನಡೆಸಲಾಗಿದೆ. ಶಿಕಾರಿಪುರ ಮತ್ತು ಭದ್ರಾವತಿ ಸಭೆ ನಡೆಸುತ್ತೇವೆ.
ಜೋಳ ಮತ್ತು ಭತ್ತ ಬೆಳೆಯುವ ರೈತರಿಗೆ 7 ಗಂಟೆ ವಿದ್ಯುತ್ ಪೂರೈಸಲಾಗುವುದು. ರಾಜ್ಯದಲ್ಲಿ ಈ ಭಾರಿ 210 ಲಕ್ಷ ಯೂನಿಟ್ ಬಳಕೆ ಯಾಗಿದೆ,18 ಲಕ್ಷ ಮಿಲಿಯನ್ ಯುನಿಟ್ ಖರೀದಿಸಲು ರಾಜ್ಯ ಸರ್ಕಾರ ಯೋಚಿಸುತ್ತಿದೆ. ಮಾಮೂಲಿಯಾಗಿ 9 ಲಕ್ಷ ಯುನಿಟ್ ವಿದ್ಯುತ್ ಮಾಮೂಲಿಯಾಗಿ ಬಳಕೆಯಾಗಲಿದೆ. ಆದರೆ ಇದಕ್ಕೂ ಡಬ್ಬಲ್ ಯುನಿಟ್ ವಿದ್ಯುತ್ ಖರೀದಿಸಲಾಗುವುದು. ಮನೆಗಳಿಗೆ ಹಾಗೂ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಹೇಳಿದರೂ
ಬರಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಬರಗಾಲದ ದುಷ್ಪರಿಣಾಮ ಅವಲೋಕಿಸಿದ್ದೇನೆ . ನಮ್ಮ ಅಂದಾಜಿನ ಪ್ರಕಾರ, ಶಿವಮೊಗ್ಗ ಜಿಲ್ಲೆಯ 238 ಗ್ರಾಮಗಳು ಭವಿಷ್ಯದಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪರಿಸ್ಥಿತಿಯನ್ನು ಎದುರಿಸಲು ಮತ್ತು ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ನಾವು ವ್ಯವಸ್ಥೆ ಮಾಡುತ್ತಿದ್ದೇವೆ, ”ಎಂದು ಅವರು ಹೇಳಿದರು. ಮೇವಿನ ಕೊರತೆ ಇಲ್ಲ ಅದಲ್ಲದೆ, ಆಡಳಿತವು ಜಾನುವಾರುಗಳಿಗೆ ಮೇವಿನ ಅಗತ್ಯವನ್ನು ನಿರ್ಣಯಿಸಿತು. ‘‘ಈಗ 6.42 ಲಕ್ಷ ಟನ್ ಮೇವು ಲಭ್ಯವಿದ್ದು, ಪ್ರತಿ ವಾರ ಸರಾಸರಿ 27 ಸಾವಿರ ಟನ್ ಮೇವು ಬೇಕಾಗುತ್ತದೆ. ಮೇವಿನ ಕೊರತೆ ಇಲ್ಲ, ಮುಂಬರುವ ದಿನಗಳಲ್ಲಿ ಅಗತ್ಯತೆ ಪರಿಗಣಿಸಿ ಅಧಿಕಾರಿಗಳು ಮೇವು ಸಾಗಣೆಗೆ ನಿರ್ಬಂಧ ಹೇರಿದ್ದಾರೆ. ದಿನಗಳು,” ಅವರು ಹೇಳಿದರು. ಅದೇ ರೀತಿ ಶಿವಮೊಗ್ಗ ಜಿಲ್ಲೆಯಲ್ಲಿ ಮನೆಗಳಿಗೆ ಹಾಗೂ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply