ಮುಗಿಯದ ಸಹ್ಯಾದ್ರಿ ಕಾಲೇಜ್ ವಿದ್ಯಾರ್ಥಿಗಳ ಪ್ರತಿಭಟನೆ ! ರಸ್ತೆ ತಡೆದು ಪ್ರತಿಭಟಿಸಿದ ವಿದ್ಯಾರ್ಥಿಗಳು ! ಇನ್ನು ಆರಂಭವಾಗಿಲ್ಲ ಶೈಕ್ಷಣಿಕ ತರಗತಿಗಳು !
ಶಿವಮೊಗ್ಗ : ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ ಮತ್ತಷ್ಟು ಜೋರಾಗಿದೆ, ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ಬೀದಿಗಿಳಿದು, ರಸ್ತೆ ತಡೆದು, ರಿಜಿಸ್ಟರ್ ಮತ್ತು ವಿ.ಸಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಗುರುವಾರ ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಇಂದು ಬೀದಿಗಿಳಿದಿದ್ದಾರೆ, ಕಳೆದ ಪ್ರತಿಭಟನೆಯಲ್ಲಿ ಶಾಸಕ ಚನ್ನಬಸಪ್ಪ, ಪ್ರಾಂಶುಪಾಲರು ಸೇರಿ ಶನಿವಾರದ ಒಳಗಡೆ ಅತಿಥಿ ಉಪನ್ಯಾಸಕರ ನೇಮಕ ಮಾಡುತ್ತೇವೆ, ಶೈಕ್ಷಣಿಕ ತರಗತಿ ಆರಂಭಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.
ಆದರೆ ಇಲ್ಲಿಯವರೆಗೂ ಶೈಕ್ಷಣಿಕ ತರಗತಿಗಳು ಆರಂಭವಾಗಿಲ್ಲ, ಮತ್ತು ಯಾವುದೇ ಅತಿಥಿ ಉಪನ್ಯಾಸಕರ ನೇಮಕವೂ ಆಗಿಲ್ಲ, ಹೀಗೆ ಆದರೆ ಮುಂದಿನ ಭವಿಷ್ಯದ ಕಥೆ ಏನು ಎಂದು ವಿದ್ಯಾರ್ಥಿಗಳು ಪ್ರಶ್ನೆ ಮಾಡಿದ್ದಾರೆ.
ಒಂದು ಬಾರಿ ಕಾಲೇಜಿಗೆ ಬಂದರೆ ರೂ 100 ರಿಂದ 200 ಖರ್ಚಾಗುತ್ತದೆ, ಉಪನ್ಯಾಸಕರಿಲ್ಲದೆ ಕೇವಲ ಖಾಲಿ ಕೊಠಡಿಗಳನ್ನು ನೋಡಿಕೊಂಡು ವಾಪಸ್ ಹೋಗುವ ಪರಿಸ್ಥಿತಿ ಬಂದಿದೆ ಎಂದು ಪ್ರತಿಭಟನೆ ನಡೆಸಿದರು.
ವರದಿ : ಲಿಂಗರಾಜು ಗಾಡಿಕೊಪ್ಪ
Leave a Reply