ಕಾಂತಾರ-2 ಪೋಸ್ಟರ್ ಬಿಡುಗಡೆ, ‘ ಅಬ್ಬಾ ಎಂಥಾ ಪೋಸ್ಟರ್ ! ಎಂದು ಪ್ರತಿಕ್ರಿಯೆ ನೀಡಿದ ಸಂಸದ ಬಿ ವೈ ರಾಘವೇಂದ್ರ !
ಶಿವಮೊಗ್ಗ : ರಿಷಬ್ ಶೆಟ್ಟಿ ಅಭಿನಯದ ಕಾಂತರಾ ಚಲನಚಿತ್ರದ ಮೊದಲ ಭಾಗ ಸಿನಿಮಾ ರಾಜ್ಯ ದೇಶ ಸೇರಿ ವಿದೇಶಗಳನ್ನು ಭಾರಿ ಸದ್ದು ಮಾಡಿ ಜನರ ಮನ ಗೆದ್ದಿತ್ತು.
27ನೆ ತಾರಿಖ್ ಸೋಮವಾರ ರಿಷಬ್ ಶೆಟ್ಟಿ ಅಭಿನಯದ ಕಾಂತರ 2 ಚಿತ್ರದ ಮೊದಲನೆಯ ಪೋಸ್ಟರ್ ಬಿಡುಗಡೆಯಾಗಿತ್ತು. ಕಾಂತರ 2 ಚಿತ್ರದ ಮೊದಲ ಪೋಸ್ಟರ್ ಗೆ ಸಂಸದ ಬಿ ವೈ ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಅಬ್ಬಾ, ಎಂಥಾ ಪೋಸ್ಟರ್! ನಿಗೂಢವಾಗಿಯೂ, ಕುತೂಹಲಕರವಾಗಿಯೂ, ಆಕರ್ಷಕವಾಗಿಯೂ ಇದೆ, ಇವತ್ತು ಬಿಡುಗಡೆಯಾಗಿರುವ ಕಾಂತಾರಾ-2 ಸಿನಿಮಾದ ಪೋಸ್ಟರ್.
ಸಿನಿಮಾಗಾಗಿ ಕಾತರದಿಂದ ಕಾಯುವ ಹಾಗೆ ಮಾಡುವಂಥದ್ದು ಇದು!
ಕನ್ನಡವೂ ಸೇರಿದಂತೆ ಏಳು ಭಾಷೆಗಳಲ್ಲಿ ತಯಾರಾಗಲಿರುವ ಈ ಚಿತ್ರದ ಕೆಲಸ ಸುಸೂತ್ರವಾಗಿ ನಡೆಯಲಿ, ಆದಷ್ಟು ಬೇಗ ಬಿಡುಗಡೆಯಾಗಿ ಯಶಸ್ಸು ಪಡೆಯಲಿ ಅನ್ನುವುದು ನನ್ನ ಹಾರೈಕೆ.
ಶ್ರೀ ರಿಷಬ್ ಶೆಟ್ಟಿ , Hombale Films, ಎಲ್ಲರಿಗೂ ನಿರೀಕ್ಷೆ ತುಂಬಿದ ಶುಭಾಶಯಗಳು! ಎಂದು ತಮ್ಮ ಫೇಸ್ಬುಕ್ ಮತ್ತು ಎಕ್ಸ್ ಖಾತೆಯ ಮೂಲಕ ಶುಭಹಾರೈಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
ಜಾಹಿರಾತು
Leave a Reply