ನಾಳೆ ಶಿವಮೊಗ್ಗಕ್ಕೆ ಬಿ.ವೈ.ವಿ ! ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರ ಸ್ವಾಗತಕ್ಕೆ ಶಿವಮೊಗ್ಗ ಸಜ್ಜು ! ಶಿವಮೊಗ್ಗದ ಬಿಜೆಪಿಯಲ್ಲಿ ಮನೆ ಮಾಡಿದ ಸಂಭ್ರಮ ! ನಾಳೆ ಏನೇನು ಕಾರ್ಯಕ್ರಮ?
ಶಿವಮೊಗ್ಗ : ಭಾರತೀಯ ಜನತಾ ಪಾರ್ಟಿಯ ನೂತನ ರಾಜ್ಯಾಧ್ಯಕ್ಷ ಆಯ್ಕೆಯಾದ ನಂತರ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಸ್ವಾಗತಕ್ಕೆ ಶಿವಮೊಗ್ಗ ಸಿಂಗಾರಗೊಂಡಿದೆ.
ಬೆಕ್ಕಿನ ಕಲ್ಮಠದಿಂದ ಹಿಡಿದು ಕಾರ್ಯಕ್ರಮ ನಡೆಯುವ ಸ್ಥಳದ ಪೆಸಿಟ್ ಕಾಲೇಜಿನವರೆಗೂ ಬಿಜೆಪಿಯ ಬಾವುಟ ಫ್ಲೆಕ್ಸ್ ರಾರಾಜಿಸುತ್ತಿದೆ, ಸುಮಾರು 2000 ಬಾವುಟಗಳನ್ನು ಕಟ್ಟಲಾಗಿದ್ದು, ಅಲ್ಲಲ್ಲಿ ರಾಜ್ಯಧ್ಯಕ್ಷರ ಕಟೌಟ್ ಸಹ ನಿರ್ಮಿಸಲಾಗಿದೆ. ಇನ್ನು ನಾಳೆ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಜೊತೆಗೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಕೂಡ ಆಗಮಿಸಲಿದ್ದಾರೆ.
ಜಾಹಿರಾತು :
ಕಾರ್ಯಕರ್ತರಿಂದ ಬೈಕ್ ರ್‍ಯಾಲಿ
ನಾಳೆ ನೂತನ ರಾಜ್ಯಾಧ್ಯಕ್ಷರ ಆಗಮನದ ವೇಳೆ ಕಾರ್ಯಕರ್ತರಿಂದ ಬೃಹತ್ ಮಟ್ಟದ ಬೈಕ್ ರ್‍ಯಾಲಿಯನ್ನು ಕೂಡ ಆಯೋಜಿಸಲಾಗಿದ್ದು, ಬೆಕ್ಕಿನ ಕಲ್ಮಠದಿಂದ ಗಾಡಿಕೊಪ್ಪದವರೆಗೂ ಬೈಕ್ ರ್‍ಯಾಲಿ ನಡೆಯಲಿದೆ, ನಂತರ ಪ್ರೇರಣ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ, ಈ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಸೇರಿದಂತೆ ಹಲವು ರಾಜ್ಯ ನಾಯಕರು ಮತ್ತು ಸ್ಥಳೀಯ ಮುಖಂಡರು ಕೂಡ ಭಾಗಿಯಾಗಲಿದ್ದಾರೆ.
ಮರುದಿನ ಶಿಕಾರಿಪುರದಲ್ಲಿ 20 ಸಾವಿರ ಕಾರ್ಯಕರ್ತರೊಂದಿಗೆ ಬೃಹತ್ ಬಹಿರಂಗ ಸಭೆ ನಡೆಯಲಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply