ಮೇವು ಬೆಳೆಗಳ ಕುರಿತು ತರಬೇತಿಗಾಗಿ ರೈತರಿಂದ ಅರ್ಜಿ ಆಹ್ವಾನ
ಶಿವಮೊಗ್ಗ : ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ , ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಸಹಯೋಗದೊಂದಿಗೆ ಡಿ.6ರಂದು ನಗರದ ವಿನೋಬನಗರದಲ್ಲಿರುವ ಪಶು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಣಿ ಅನುವಂಶೀಯತೆ ಹಾಗೂ ತಳಿ ಶಾಸ್ತ್ರ ವಿಭಾಗದಲ್ಲಿ ರೈತರಿಗೆ ಮೇವು ಬೆಳೆಗಳ ಕುರಿತು ತರಬೇತಿಯನ್ನು ಆಯೋಜಿಸಲಾಗಿದೆ.
ತರಬೇತಿ ಕಾರ್ಯಕ್ರಮದಲ್ಲಿ ಮಲೆನಾಡು ಗಿಡ್ಡತಳಿ ಹೊಂದಿರುವ ಸಣ್ಣ ಹಿಡುವಳಿದಾರಿಗೆ ಹುಲ್ಲುಗಾವಲು ನಿರ್ವಹಣೆ, ವಿವಿಧ ಮೇವು ಬೆಳೆಗಳ ಬೇಸಾಯ ಕ್ರಮಗಳು, ಮೇವಿನಿಂದ ಬರುವ ವಿಷಕಾರಕ ಅಂಶಗಳು ಮತ್ತು ಸಾರ್ವಜನಿಕ ಆರೋಗ್ಯ, ಮೇವಿನ ಕೊರತೆಯಿಂದ ಆಗುವ ಸಂತಾನೋತ್ಪತ್ತಿ ಸಮಸ್ಯೆಗಳು ಈ ಕುರಿತು ತರಬೇತಿ ಹಾಗೂ ಮೇವು ಬೆಳೆಗಳ ತಾಕುಗಳಿಗೆ ಬೇಟಿಯನ್ನು ಮಾಡಿಸಲಾಗುವುದು.
ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ತಮ್ಮ ಹೆಸರನ್ನು ಡಾ. ಪ್ರಶಾಂತ್, ಬಾಗಲಕೋಟೆ, 8861533578 ಮತ್ತು ಡಾ. ಹರೀಶ್ ಎಂ.-8073717760 ಮೊಬೈಲ್ ನಂ.ಗಳಿಗೆ ಎಸ್.ಎಂ.ಎಸ್., ವಾಟ್ಸಪ್ ಮೂಲಕ ಅಥವಾ ರಾ.ಕೃ. ವಿಕಾಸ ಯೋಜನಾ ಸಂಯೋಜಕರು, ಪ್ರಾಂಇ ಅನುವಂಶೀಯತೆ ಹಾಗೂ ತಳಿಶಾಸ್ತ್ರವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ವಿನೋಬನಗರ, ಶಿವಮೊಗ್ಗ ಇಲ್ಲಿ ನೇರ ಸಂಪರ್ಕ ಮಾಡಿ ನೊಂದಾಯಿಸಿಕೊಳ್ಳುವಂತೆ ವಿಭಾಗದ ಸಹ ಪ್ರಾಧ್ಯಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply