ರಂಗೇರುತ್ತಿದೆ ಶಿವಮೊಗ್ಗ ರಾಜಕಾರಣ ! ಬಿಜೆಪಿ ರಾಜ್ಯಾಧ್ಯಕ್ಷರ ಬೇಟಿಗೂ ಮುನ್ನ ಶಿಕಾರಿಪುರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ! ಕುತೂಹಲ ಮೂಡಿಸಿದ ಸಚಿವರ ಭೇಟಿ !
ಶಿವಮೊಗ್ಗ : ಲೋಕಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ಶಿವಮೊಗ್ಗ ರಾಜಕಾರಣ ರಂಗೇರುತ್ತಿದೆ. ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ಕೆಲವು ತಿಂಗಳುಗಳು ಬಾಕಿ ಇದೆ ಅಷ್ಟೇ, ಚುನಾವಣೆ ಸಮೀಪಿಸುತ್ತಿದ್ದಂತೆ ಶಿವಮೊಗ್ಗಕ್ಕೆ ರಾಜ್ಯ ನಾಯಕರ ದಂಡು ಹರಿದು ಬರುತ್ತಿದೆ.
ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಇಂದು ಶಿವಮೊಗ್ಗಕ್ಕೆ ಮತ್ತು ನಾಳೆ ಶಿಕಾರಿಪುರಕ್ಕೆ ಭೇಟಿ ನೀಡಲಿದ್ದಾರೆ, ನಾಳೆ ಶಿಕಾರಿಪುರದ ಬಿ ವೈ ವಿಜಯೇಂದ್ರರ ಬಹಿರಂಗ ಸಮಾವೇಶಕ್ಕೂ ಮೊದಲು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇಂದು ಶಿಕಾರಿಪುರಕ್ಕೆ ಭೇಟಿ ನೀಡಲಿದ್ದಾರೆ.
ದಿನಾಂಕ 26 ಮತ್ತು 27ನೆಯ ತಾರೀಖು ಶಿವಮೊಗ್ಗದಲ್ಲಿ ಇದ್ದಂತಹ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬರ ನಿರ್ವಹಣೆಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದರು, ಈ ವೇಳೆ ಜಿಲ್ಲೆಯ 7 ತಾಲೂಕುಗಳಲ್ಲಿ 5 ತಾಲೂಕುಗಳ ಬರನಿರ್ವಹಣೆ ಸಭೆ ಸಂಪೂರ್ಣವಾಗಿ ಮುಗಿಸಿದ್ದೇವೆ. ಭದ್ರಾವತಿ ಮತ್ತು ಶಿಕಾರಿಪುರ ಬರ ನಿರ್ವಹಣೆ ಸಭೆ ನಡೆಸಿಲ್ಲ ಎಂದು ಹೇಳಿದ್ದರು.
ಇಂದು ಸಂಜೆ 4:30 ಕ್ಕೆ ಹಾವೇರಿ ಜಿಲ್ಲೆಯ ಬ್ಯಾಡಗಿಯ ಕದರಮಂಡಲಗಿಯಿಂದ ಶಿಕಾರಿಪುರಕ್ಕೆ ಆಗಮಿಸಲಿರುವ ಜಿಲ್ಲಾ ಉಸ್ತುವಾರಿ ಪ್ರತಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕಾರಿಪುರ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ, ಬರಗಾಲ ಮತ್ತು ಪ್ರಗತಿ ಪರಿಶೀಲನೆ ಸಭೆಯನ್ನ ಹಮ್ಮಿಕೊಂಡಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply