ತೆರೆದ ವಾಹನದಲ್ಲಿ ನೂತನ ರಾಜ್ಯಾಧ್ಯಕ್ಷರ ಮೆರವಣಿಗೆ | ಬಿಎಸ್ ವೈ, ಕೆ ಎಸ್ ಈಶ್ವರಪ್ಪ ಸೇರಿದಂತೆ ಹಲವು ನಾಯಕರ ಸಾಥ್,

ತೆರೆದ ವಾಹನದಲ್ಲಿ ನೂತನ ರಾಜ್ಯಾಧ್ಯಕ್ಷರ ಮೆರವಣಿಗೆ | ಬಿಎಸ್ ವೈ, ಕೆ ಎಸ್ಈಶ್ವರಪ್ಪ ಸೇರಿದಂತೆ ಹಲವು ನಾಯಕರ ಸಾಥ್,

ಶಿವಮೊಗ್ಗ : ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಬಿ ವೈ ವಿಜಯೇಂದ್ರ ಶಿವಮೊಗ್ಗಕ್ಕೆ ಆಗಮಿಸಿದ್ದು, ಅದ್ದೂರಿ ಸ್ವಾಗತವನ್ನು ಕೋರಲಾಗಿದೆ.

ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತೂರಿನ ಆರ್ ಎಸ್ ಎಸ್ ಪ್ರಮುಖರಾದ ಪಟ್ಟಾಭಿರಾಮ್ ಮತ್ತು ಬಿಜೆಪಿ ಮುಖಂಡರಾದ ಭಾನುಪ್ರಕಾಶ್, ಕೆ ಎಸ್ ಈಶ್ವರಪ್ಪ ಮನೆಗೆ ಭೇಟಿ ನೀಡಿ ಈಶ್ವರಪ್ಪನವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದು,

 ಬೆಕ್ಕಿನ ಕಲ್ಮಠಕ್ಕೆ ತೆರಳಿ ಮಠದಿಂದ ಸನ್ಮಾನ ಕಾರ್ಯಕ್ರಮ ಸ್ವೀಕರಿಸಿದ್ದಾರೆ.

ನಂತರ ಬೆಕ್ಕಿನ ಕಲ್ಮಠದಿಂದ ಬೃಹತ್ ಬೈಕ್ ರ‍್ಯಾಲಿ ಮುಖಾಂತರ

ತೆರೆದ ವಾಹನದಲ್ಲಿ ಪೆಸಿಟ್ ಕಾಲೇಜಿನವರೆಗೂ ಮೆರವಣಿಗೆ ನಡೆಸಲಾಯಿತು. ಮಾರ್ಗ ಮಧ್ಯೆ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರರವರಿಗೆ ಬೃಹತ್ ಸೇಬಿನ ಹಾರ ಹಾಕಲಾಯಿತು

 ಈ ವೇಳೆ ತಂದೆ ಬಿ. ಎಸ್ ಯಡಿಯೂರಪ್ಪ, ಕೆ ಎಸ್ ಈಶ್ವರಪ್ಪ, ಬಿ ವೈ ರಾಘವೇಂದ್ರ ಸೇರಿದಂತೆ ಹಲವು ರಾಜಕೀಯ ನಾಯಕರು ಸಾಥ್ ನೀಡಿದರು 

ಪೆಸಿಟ್ ಕಾಲೇಜ್ ಗೆ ಮೆರವಣಿಗೆ ವಾಹನ ಬರುತ್ತಿದ್ದಂತೆ ಅದ್ದೂರಿ ಸ್ವಾಗತ ಕೋರಿ ವಾದ್ಯಗಳ ಮೂಲಕ ಪ್ರೇರಣಾ ಸಭಾಂಗಣಕ್ಕೆ ಕರೆದೋಯ್ಯಲಾಯಿತು.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.