ಸಹ್ಯಾದ್ರಿ ಕಾಲೇಜಿನ ಪರಿಸ್ಥಿತಿ ನೋಡಿದರೆ ತಲ್ಲಣವಾಗುತ್ತದೆ, ಕುವೆಂಪು ವಿವಿ ಮೈಮರೆತು ಕುಳಿತಿದೆ – ಆಯನೂರ್ ಮಂಜುನಾಥ್

ಶಿವಮೊಗ್ಗ : ಸಹ್ಯಾದ್ರಿ ಕಾಲೇಜಿನ ಪರಿಸ್ಥಿತಿ ನೋಡಿದರೆ ತಲ್ಲಣವಾಗುತ್ತದೆ, ಅತಿಥಿ ಉಪನ್ಯಾಸಕರನ್ನು ನೇಮಿಸದೆ ಕುವೆಂಪು ವಿಶ್ವವಿದ್ಯಾಲಯ ಮೈಮರೆತು ಕುಳಿತಿದೆ ಕಾಲೇಜು ಆರಂಭವಾಗಿ ಎರಡು ತಿಂಗಳಾದರೂ ಪಾಠ ನಡೆಯುತ್ತಿಲ್ಲ ಕುವೆಂಪು ವಿವಿ ವಿರುದ್ದ ಹರಿಹಾಯ್ದ ಕೆಪಿಸಿಸಿ ವಕ್ತಾರಾ ಆಯನೂರ್ ಮಂಜುನಾಥ್

ಬುಧವಾರ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರಾ ಆಯನೂರ್ ಮಂಜುನಾಥ್ ಅತಿಥಿ ಉಪನ್ಯಾಸಕರು ತಮ್ಮ ಸೇವಾ ಭದ್ರತೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ, ಸುಮಾರು 15 -20 ವರ್ಷಗಳಿಂದ ಅವರು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ, ಜಿಲ್ಲೆಯಲ್ಲಿ ಖಾಯಂ ಉಪನ್ಯಾಸಕರಿಗಿಂತ ಅತಿಥಿ ಉಪನ್ಯಾಸಕರು ಎರಡು ಪಟ್ಟು ಹೆಚ್ಚಿದ್ದಾರೆ. ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಪ್ರತಿಭಟನೆ ವಿದ್ಯಾರ್ಥಿಗಳ ಕಲಿಕೆಗೆ ಸಾಕಷ್ಟು ತೊಂದರೆಯಾಗುತ್ತದೆ, ಕಾಲೇಜು ಆರಂಭವಾಗಿ ಎರಡು ತಿಂಗಳಾದರೂ ಪಾಠ ನಡೆಯುತ್ತಿಲ್ಲ, ಉಪನ್ಯಾಸಕರನ ನೇಮಿಸಿದೆ ಕುವೆಂಪು ವಿಶ್ವವಿದ್ಯಾಲಯ ಮೈಮರೆತು ಕುಳಿತಿದೆ ಎಂದರು 

ಅತಿಥಿ ಉಪನ್ಯಾಸಕರು ತುಂಬಾ ಸಂಕಷ್ಟದಲ್ಲಿದ್ದಾರೆ, ಅವರನ್ನು ಎರಡನೆಯ ದರ್ಜೆ ನಾಗರಿಕರನ್ನಾಗಿ ನಡೆಸಿಕೊಳ್ಳುತ್ತಿದೆ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಸರ್ಕಾರ ಬಗೆಹರಿಸಲಿದೆ ಎಂಬ ವಿಶ್ವಾಸ ಇದೆ. ಉನ್ನತ ಶಿಕ್ಷಣ ಸಚಿವರು ಆದಷ್ಟು ಬೇಗ ಇವರ ಸಮಸ್ಯೆ ಬಗೆಹರಿಸಲಿ ಎಂದು ಒತ್ತಾಯಿಸಿದರು

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.