ಪಕ್ಷದಿಂದ ದೂರ ಉಳಿಯುತ್ತಿದ್ದಾರಾ ಕುಮಾರ್ ಬಂಗಾರಪ್ಪ ? ಸಾಲು ಸಾಲು ಬಿಜೆಪಿ ಕಾರ್ಯಕ್ರಮಗಳಲ್ಲಿ ಗೈರು ! ಅನುಮಾನ ಹುಟ್ಟಿಸುತ್ತಿದೆ ಕುಮಾರ್ ಬಂಗಾರಪ್ಪರವರ ನಡೆ !
ಶಿವಮೊಗ್ಗ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸೊರಬದಲ್ಲಿ ಸೋಲನ್ನು ಅನುಭವಿಸಿದ್ದರು, ಅದಾದಮೇಲೆ ಹಲವು ಸುದ್ದಿ,ದೃಶ್ಯ ಮಾಧ್ಯಮಗಳಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರುತ್ತಾರೆ, ಶಿವಮೊಗ್ಗದಿಂದ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಅದಾದ ಬಳಿಕ ಸಂಸದ ಬಿ ವೈ ರಾಘವೇಂದ್ರ ಕುಮಾರ್ ಬಂಗಾರಪ್ಪ ಯಾವ ಪಕ್ಷಕ್ಕೂ ಹೋಗಲ್ಲ ಬಿಜೆಪಿಯಲ್ಲಿ ಇರುತ್ತಾರೆ. ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದರು.
ಆದರೆ ಶಿವಮೊಗ್ಗದಲ್ಲಿ ನಡೆಯುತ್ತಿದ್ದಂತಹ ಸಾಲು ಸಾಲು ಬಿಜೆಪಿ ಕಾಯ ಕಾರ್ಯಕ್ರಮಗಳಲ್ಲಿ ಕುಮಾರ್ ಬಂಗಾರಪ್ಪ ಗೈರಾಗಿದ್ದು, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಪಕ್ಷದಿಂದ ದೂರ ಉಳಿಯುತ್ತಿದ್ದಾರಾ ? ಬಿಜೆಪಿ ಪಕ್ಷವನ್ನು ಬಿಡುತ್ತಾರ ? ಎಂಬ ಅನುಮಾನಕ್ಕೆ ಏನು ಎಡೆ ಮಾಡಿಕೊಟ್ಟಿದೆ.
ಬಿಜೆಪಿಯ ನೂತನ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಬಿವೈ ವಿಜಯೇಂದ್ರ ಬುಧವಾರ ಶಿವಮೊಗ್ಗಕ್ಕೆ ಆಗಮಿಸಿದ್ದರು, ಜಿಲ್ಲಾ ಬಿಜೆಪಿ ವತಿಯಿಂದ ಬಿ ವೈ ವಿಜಯೇಂದ್ರ ಅವರಿಗೆ ಅದ್ದೂರಿ ಸ್ವಾಗತವನ್ನು ಕೋರಲಾಯಿತು, ಈ ವೇಳೆ ಹಲವು ರಾಜ್ಯ ನಾಯಕರು, ಸ್ಥಳೀಯ ಬಿಜೆಪಿ ಮುಖಂಡರು ಸೇರಿದಂತೆ ಹಲವರಿದ್ದರು, ಆದರೆ ಇಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪನವರು ಮಾತ್ರ ಹಾಜರಿರಲಿಲ್ಲ.
ಇನ್ನೂ ಮರುದಿನ ಗುರುವಾರದ ದಿನದಂದು ಮಾಜಿ ಮುಖ್ಯಮಂತ್ರಿಗಳು ಬಿಎಸ್ ಯಡಿಯೂರಪ್ಪನವರ ತವರು ಕ್ಷೇತ್ರ ಶಿಕಾರಿಪುರದಲ್ಲಿ ತಾಲೂಕು ಬಿಜೆಪಿ ವತಿಯಿಂದ ಅಭಿನಂದನಾ ಸಮಾರಂಭ ಮತ್ತು ಬೃಹತ್ ಬಿಜೆಪಿ ಕಾರ್ಯಕರ್ತರ ಬಹಿರಂಗ ಸಭೆಯನ್ನು ಆಯೋಜಿಸಲಾಗಿತ್ತು. ಇಲ್ಲೂ ಹಲವು ರಾಜ್ಯ, ಜಿಲ್ಲಾ ನಾಯಕರು ಭಾಗಿಯಾಗಿದ್ದರು ಕೂಡ ಕುಮಾರ್ ಬಂಗಾರಪ್ಪ ಮಾತ್ರ ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಈ ಸಾಲು ಸಾಲು ಬಿಜೆಪಿ ಕಾರ್ಯಕ್ರಮಗಳಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಗೈರಾಗಿದ್ದು ಹಲವು ಅನುಮಾನಗಳಿಗೆ ಪುಷ್ಟಿ ನೀಡಿದೆ. ವಿಧಾನಸಭಾ ಸೋಲಿನ ಬಳಿಕ ಕುಮಾರ್ ಬಂಗಾರಪ್ಪ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಂಡಿಲ್ಲ, ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ, ಈ ಎಲ್ಲಾ ಬೆಳವಣಿಗೆಗಳು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರ ಎಂಬ ಅನುಮಾನ ಹುಟ್ಟಿಸುತ್ತಿದೆ.
ಇನ್ನೂ ಸಹೋದರ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪನವರನ್ನು ಮಾಧ್ಯಮದವರು ಈ ವಿಷಯಗಳನ್ನು ಕೇಳಿದಾಗ , ಇದೆಲ್ಲಾ ಸುಳ್ಳು, ನಮ್ಮ ಪಕ್ಷದಲ್ಲಿಯೇ ಅಭ್ಯರ್ಥಿಯಾಗುವವರು ಇದ್ದಾರೆ, ಎಂದು ಹೇಳಿ ಈ ವಿಚಾರವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ,
ಬಿಜೆಪಿಯ ಚಟುವಟಿಕೆಗಳಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಗೈರಾಗಿದ್ದು ಅನುಮಾನ ಹುಟ್ಟಿಸಿದ್ದಂತು ನಿಜ, ಶಿವಮೊಗ್ಗ ರಾಜಕಾರಣದ ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
ಜಾಹಿರಾತು
Leave a Reply