ಚಿಕಪ್ಪನನ್ನೇ ಪೆಟ್ರೋಲ್ ಹಾಕಿ ಜೀವಂತ ಸುಟ್ಟು ಹಾಕಿದ ಮಕ್ಕಳು ! ದೇಹ ಸುಡುತ್ತಿದ್ದರು ಹೇಳಿಕೆ ನೀಡಿದ ವ್ಯಕ್ತಿ !
ಶಿವಮೊಗ್ಗ : ಸ್ವಂತ ಚಿಕ್ಕಪ್ಪನನ್ನೆ ಪೆಟ್ರೋಲ್ ಹಾಕಿ ಜೀವಂತ ಸುಟ್ಟು ಹಾಕಿದ ಘಟನೆ ಶಿವಮೊಗ್ಗ ತಾಲೂಕಿನ ಬೆಳಲಕಟ್ಟೆ ಗ್ರಾಮದಲ್ಲಿ ನಡೆದಿದೆ.
ಬೆಳಲಕಟ್ಟೆ ಗ್ರಾಮದಿಂದ ಮಗಳ ಮನೆಗೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ತೋಟಕ್ಕೆ ನೀರು ಬಿಡಲು ಹೋಗಿದ್ದಾರೆ. ನಿನ್ನೆ ಮೋಟರ್ ಕೆಟ್ಟಿದ್ದ ಕಾರಣ ಇಂದು ಮೋಟರ್ ಬದಲಾಯಿಸಲು ಬೈಕ್ ನಲ್ಲಿ ಐವತ್ತು ಸಾವಿರ ದುಡ್ಡು ಇಟ್ಟುಕೊಂಡು ಹೋಗಿದ್ದರು.
ಮುತ್ತೋಡು ಕ್ರಾಸ್ ಮಹೇಶಪ್ಪ (60) ಹೋಗುತ್ತಿದ್ದ ವೇಳೆ ಕುಮಾರಪ್ಪ,ಮತ್ತು ಕಾರ್ತಿಕ್ ಮಹೇಶಪ್ಪನ ಬೈಕ್ ಅಡ್ಡಗಟ್ಟಿ, ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ. ದೇಹ ಸುಡುತಿದ್ದರು ಮಹೇಶಪ್ಪ ಘಟನೆಯನ್ನು ವಿವರಿಸಿದ್ದಾರೆ. ಇದನ್ನು ಅಲ್ಲಿದ್ದ ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದಾರೆ.
ತಕ್ಷಣವೇ ಅಲ್ಲಿದ್ದ ಸ್ಥಳೀಯರು ಮಹೇಶಪ್ಪನನ್ನು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ವೈದ್ಯರು ಉಳಿಯುವ ಸಾಧ್ಯತೆ ಕಡಿಮೆ ಇದೆ. ಮಹೇಶಪ್ಪನನ್ನು ಆಸ್ಪತ್ರೆಗೆ ಕರೆತರಲಾಗಿದೆ ಮೆಗ್ನ ಆಸ್ಪತ್ರೆಯಲ್ಲಿ ಮಹೇಶಪ್ಪ ಕೊನೆಯುಸಿರೇಳದಿದ್ದಾರೆ.
ಕುಮಾರಪ್ಪ, ಮಗ ಕಾರ್ತಿಕ್ ಮತ್ತು ಇತರರ ಹೆಸರನ್ನ ಸುಟ್ಟ ಸ್ಥಿತಿಯಲ್ಲಿ ಮಹೇಶಪ್ಪ ಹೇಳಿರುವುದನ್ನ ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದಾರೆ,ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಮೀನ ವಿಚಾರದಲ್ಲಿ ಮನಸ್ತಾಪವಿದ್ದ ಕಾರಣ ಹೀಗೆ ಮಾಡಿದ್ದಾರೆ ಎಂದು ಮಹೇಶಪ್ಪನ ಕುಟುಂಬ ಆರೋಪಿಸಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply