ಸದಾಶಿವ ಆಯೋಗ ಜಾರಿಗೊಳಿಸದಂತೆ ಜಿಲ್ಲಾ ಬಂಜಾರ ಸಂಘ ಮನವಿ
ಶಿವಮೊಗ್ಗ : ಕಾಂಗ್ರೆಸ್ ಸರ್ಕಾರ ಸದಾಶಿವ ಆಯೋಗವನ್ನ ಜಾರಿಗೊಳಿಸಲು ಹೊರಟಿದೆ,ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸದಾಶಿವ ಆಯೋಗವ ಜಾರಿ ಗೊಳಿಸುವಂತೆ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಸದಾಶಿವ ಆಯೋಗವನ್ನ ಜಾರಿಗೊಳಿಸುವಂತೆ ಬಿಜೆಪಿ ಒಳಮೀಸಲಾತಿ ತರಲು ಯೋಚಿಸಿ ಅದು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತ್ತು. ಈ ಹಿನ್ನಲೆಯಲ್ಲಿ ಎಜೆ ಸದಾಶಿವ ಆಯೋಗವನ್ನ ಬಿಜೆಪಿ ತಿರಸ್ಕರಿದೆ, ಆದರೆ ಈಗ ಕಾಂಗ್ರೆಸ್ ಮತ್ತೆ ಆಯೋಗದ ವರದಿ ಜಾರಿಗೆತರಲು ಹೊರಟಿದೆ,
ಸಮಾಜ ಕಲ್ಯಾಣದ ಪ್ರಧಾನಿ ಕಾರ್ಯದರ್ಶಿ ಮಣಿವಣ್ಣನ್ ಅವರು ಎಜೆ ಸದಾಶಿವ ಆಯೋಗ ಈಗ ಸೂಕ್ತವಲ್ಲವೆಂದು ಬರೆದಿದ್ದಾರೆ ಎಂದು ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು
ಕಾಂಗ್ರೆಸ್ ಸರ್ಕಾರ ಬೋವಿ ಲಂಬಾಣಿ ಕೊರಮ, ಕೊರಚ ಫೆಬ್ರವರಿ 16 ರ ಕ್ಕೆ ಜಾರಿಗೆ ಬರುವಂತೆ ವಂದಿತಾ ಶರ್ಮ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ. ಆದರೆ ಮುನಿಯಪ್ಪನವರು ಸದಾಶಿವ ಆಯೋಗವನ್ನ ಜಾರಿಗೆ ತರುವುದಾಗಿ ಹೇಳಿದ್ದಾರೆ. ಅವೈಜ್ಞಾನಿಕ ವರದಿಯನ್ನ ಸಾರಾಸಗಟವಾಗಿ ತಿರಸ್ಕರಿಸಿದೆ ಜಾರಿಗೊಳಿಸಬಾರದು. ಸದನದಲ್ಲಿ ಈ ವಿಷಯ ಮಂಡನೆಯಾಗಬಾರದು. ಸದಾಶಿವ ವರದಿಯನ್ನ ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು.
ಒಂದು ವರ್ಷದ ಹಿಂದೆ ಸಾರ್ವಜನಿಕ ಚರ್ಚೆಗೆ ತರದೆ ಜಾರಿ ತರಲು ಹೊರಟಿದ್ದು ಚುನಾವಣೆಯ ವೇಳೆ ಪಕ್ಷಕ್ಕೆ ಹಿನ್ನಡೆಯಾಯಿತು ಎಂದು ಮಾಜಿ ಶಾಸಕರು ತಿಳಿಸಿದರು. ಆದರೆ ಇದೇ ಶಾಸಕರು ಆ ವೇಳೆ ಒಳ ಮೀಸಲಾತಿಯನ್ನ ಬೆಂಬಲಿಸಿದ್ದರು.
ಒಂದು ವೇಳೆ ಜಾರಿಗೆ ತಂದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಶಿವಾನಂದ ನಾಯ್ಕ್, ನಾಗರಾಜ್ ನಾಯ್ಕ್, ವಾಸುದೇವ ನಾಯ್ಕ್, ಉಪಸ್ಥಿತರಿದ್ದರು
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply