ಕದಂಬ ಕನ್ನಡ ಯುವಕರ ಸಂಘದ ವತಿಯಿಂದ 22ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ, ಡಾ. ಧನಂಜಯ್ ಸರ್ಜಿ,ಹೆಚ್ ಸಿ ಯೋಗೇಶ್, ಪ್ರೊ ಬಿ ಎಂ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಬಾಗಿ
ಶಿವಮೊಗ್ಗ : ನಗರದ ವಿನಾಯಕ ನಗರದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕದಂಬ ಕನ್ನಡ ಯುವಕರ ಸಂಘದ ವತಿಯಿಂದ 22ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ನಗರದ ವಿನಾಯಕ ನಗರದಲ್ಲಿ ಕದಂಬ ಕನ್ನಡ ಯುವಕರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗಿದ್ದು. ಈ ವರ್ಷ ವಿಶೇಷವಾಗಿ ಎರಡು ದಿನಗಳ ಕಾಲ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗಿದೆ. ಭಾನುವಾರ ನಡೆದಂತಹ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಶ್ರೀ ನವ್ಯಶ್ರೀ ನಾಗೇಶ್, ಭೂಪಾಳಂ ಶ್ರೀ ಶಶಿಧರ್, ಪ್ರೊ. ಕುಮಾರಸ್ವಾಮಿ ರವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸರ್ಜಿ ಆಸ್ಪತ್ರೆಗಳ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಧನಂಜಯ್ ಸರ್ಜಿ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಂತಹ ಭಾಷೆ ಕನ್ನಡ ಭಾಷೆ, ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಅತ್ಯದ್ಭುತ ಭಾಷೆ,ಶಾಸ್ತ್ರಿಯ ಸ್ಥಾನಮಾನವನ್ನು ನಮ್ಮ ಕನ್ನಡ ಭಾಷೆ ಹೊಂದಿದೆ ಎಂದರು. ಇಂತಹ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆಯ ಪ್ರೇಮವನ್ನ ಮೆರೆಯುತ್ತಿರುವಂತಹ ಕದಂಬ ಕನ್ನಡ ಯುವಕರ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು ಹಾಗೂ ಕಲಿಯೋಕೆ ನೂರು ಭಾಷೆ ಇದ್ದರೂ ಆಡೋಕೆ ಒಂದೇ ಭಾಷೆ ಅದು ಕನ್ನಡ ಒಂದೇ , ಏಕೆಂದರೆ ಹೃದಯಕ್ಕೆ ತುಂಬಾ ಹತ್ತಿರವಾಗುವಂತಹ ಶಕ್ತಿ ಇರುವುದು ಕನ್ನಡ ಭಾಷೆಗೆ ಮಾತ್ರ, ಹಾಗಾಗಿ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ನಮ್ಮಿಂದಾಗಬೇಕು ಎಂದು ಹೇಳಿದರು.
ನಿರ್ಮಲ ತುಂಗಾ ಅಭಿಯಾನ ತಂಡದ ಮುಖ್ಯಸ್ಥರು, ಹಾಗೂ ಪರಿಸರವಾದಿಗಳು ಆದಂತಹ ಪ್ರೊ.ಬಿ ಎಂ ಕುಮಾರಸ್ವಾಮಿ ಮಾತನಾಡಿ ನಾವೆಲ್ಲರೂ ಸೇರಿ ಕನ್ನಡ ಭಾಷೆಯನ್ನು ಹಾಗೂ ನಮ್ಮ ಪರಿಸರವನ್ನು ಉಳಿಸುವ ಕಾರ್ಯವನ್ನು ಮಾಡಬೇಕು ಅದು ನಮ್ಮ ನಿಮ್ಮೆಲ್ಲರ ಮೊದಲನೇ ಕರ್ತವ್ಯ, ಈ ಕೆಲಸವನ್ನು ಒಬ್ಬರು ಅಥವಾ ಇಬ್ಬರು ಮಾಡಿದರೆ ಸಾಲದು, ಎಲ್ಲಾ ಒಟ್ಟುಗೂಡಿ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.
ನಂತರ ಮಾತನಾಡಿದ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಎಚ್ ಸಿ ಯೋಗೇಶ್ ವೇದಿಕೆಯ ಮೇಲೆ ನಾವೆಲ್ಲ ಕುಳಿತಿರುವ ಪಕ್ಷಗಳು ಬೇರೆ ಬೇರೆ ಆಗಿರಬಹುದು, ನಮ್ಮ ನಮ್ಮ ಪಕ್ಷದ ಚಿಹ್ನೆಗಳು ಬೇರೆ ಬೇರೆ ಆಗಿರಬಹುದು, ಆದರೆ ನಾವೆಲ್ಲರೂ ಕನ್ನಡಿಗರು, ಕನ್ನಡ ತಾಯಿಯ ಮಕ್ಕಳು, ನಾವು ಧರಿಸಿಕೊಂಡಿರುವ ಕನ್ನಡದ ಶಾಲಿನ ಬಣ್ಣ ಒಂದೇ, ಎರಡು ದಿನ ಕನ್ನಡ ರಾಜ್ಯೋತ್ಸವ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ,ಕದಂಬ ಕನ್ನಡ ಯುವಕರ ಸಂಘದಿಂದ ಇನ್ನೂ ಹೆಚ್ಚು ಹೆಚ್ಚು ಕನ್ನಡದ ಕಾರ್ಯಕ್ರಮಗಳು ನಡೆಯಲಿ ಎಂದು ಹೇಳಿದರು.
ಕರ್ನಾಟಕ ವಿಧಾನ ಪರಿಷತ್ ನ ಸದಸ್ಯರಾದ ಶ್ರೀ ಡಿ.ಎಸ್ ಅರುಣ್ ಮಾತನಾಡಿ ಈ ವರ್ಷ ಕರ್ನಾಟಕ ಎಂದು ನಾಮಕರಣ ಆಗಿ 50ನೇ ವರ್ಷ ತುಂಬಿದೆ, ಹಾಗಾಗಿ ಕರ್ನಾಟಕದಲ್ಲಿ ನೆಲೆಸಿರುವಂತಹ ನಮಗೆಲ್ಲರಿಗೂ ಇದೊಂದು ಹೆಮ್ಮೆಯ ವಿಷಯ, ಕದಂಬ ಕನ್ನಡ ಯುವಕರ ಸಂಘದ ವತಿಯಿಂದ ಮೊದಲನೆಯ ಬಾರಿಗೆ ಎರಡು ದಿನದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವುದನ್ನು ಯೋಚಿಸಿ ಅಧ್ಯಕ್ಷರಾದ ರಾಜೇಂದ್ರ ಅವರ ನೇತೃತ್ವದಲ್ಲಿ ಇಂದು ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವುದು ಸಂತೋಷತಂದಿದೆ ಎಂದು ಶುಭಕೋರಿದರು.
ಈ ಸಂದರ್ಭದಲ್ಲಿ, ಮಾಜಿ ಸೂಡ ಅಧ್ಯಕ್ಷರು ಎಸ್ ಎಸ್ ಜ್ಯೋತಿಪ್ರಕಾಶ್, ಖ್ಯಾತ ಉದ್ಯಮಿ ಭೂಪಾಳಂ ಶ್ರೀ ಶಶಿಧರ್, ಖ್ಯಾತ ಪರಿಸರವಾದಿ ಪ್ರೊ. ಬಿ ಎಂ ಕುಮಾರಸ್ವಾಮಿ, ನವ್ಯಶ್ರೀ ನಾಗೇಶ್, ಅಧ್ಯಕ್ಷರಾದ ರಾಜೇಂದ್ರ ಕುಮಾರ್, ಅರುಣ್ ಈ, ದಿನೇಶ್ ಎಸ್ ಪಿ, ಮುರುಗನ್ ಆರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply