ಶಿವಮೊಗ್ಗ- ಭದ್ರಾವತಿ ರೈಲ್ವೆ ಕ್ರಾಸಿಂಗ್ ತಾತ್ಕಾಲಿಕವಾಗಿ ಬಂದ್ ! ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚನೆ !

ಶಿವಮೊಗ್ಗ : ಶಿವಮೊಗ್ಗ-ಭದ್ರಾವತಿ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ:34 (ಕಿ.ಮೀ.47/400- 500)ನ್ನು ತಾಂತ್ರಿಕವಾಗಿ ಪರಿಶೀಲನೆ ಮಾಡುವುದಕ್ಕಾಗಿ ಮೂರು ದಿನಗಳ ಕಾಲ ಬಂದ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡಿ.5 ರಿಂದ ಡಿ.7 ರವರೆಗೆ ಗೇಟ್ ಮುಚ್ಚಿ ಪರ್ಯಾಯ ಮಾರ್ಗ ಕಲ್ಪಿಸುವಂತೆ ರೈಲ್ವೆ ಇಲಾಖೆ ಕೋರಿತ್ತು.

ಶಿವಮೊಗ್ಗದಿಂದ ಬಿಳಕಿ ಕ್ರಾಸ್ ಮುಖಾಂತರ ಕೃಷ್ಣಪ್ಪ ವೃತ್ತ ತಲುಪಿ ಭದ್ರಾವತಿಗೆ ಬರುವ ರಸ್ತೆಯಲ್ಲಿ ರೈಲ್ವೆ ಕ್ರಾಸನ್ನು ಮುಚ್ಚಿ ಪರ್ಯಾಯ ಮಾರ್ಗವಾಗಿ ಶಿವಮೊಗ್ಗದಿಂದ ಭದ್ರಾವತಿಗೆ ಹಾಗೂ ಭದ್ರಾವತಿಯಿಂದ ಶಿವಮೊಗ್ಗಕ್ಕೆ ಸಂಚರಿಸಲು ಅನಕೂಲ ಮಾಡಿಕೊಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಈ ಮಾರ್ಗಗಳನ್ನ ಉಲ್ಲೇಖಿಸಿ ಎರಡು ದಿನ ರೈಲ್ವೆ ಕ್ರಾಸಿಂಗ್ ತಾತ್ಕಾಲಿಕ ಬಂದ್ ಮಾಡಿ ಪರ್ಯಾಯ ಆಗಮನ ಸೂಚಿಸಲು ಆದೇಶಿಸಿದ್ದಾರೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಶಿವಮೊಗ್ಗ – ಭದ್ರಾವತಿ ಪರ್ಯಾಯ ಮಾರ್ಗ ಯಾವುದು ?

ಕಾರು, ಟ್ಯಾಕ್ಸಿ ಹಾಗೂ ಇತರೆ ನಾಲ್ಕು ಚಕ್ರದ ಲಘು ವಾಹನಗಳ ಸಂಚಾರಕ್ಕೆ ಬಿಳಕಿ ಕ್ರಾಸ್ -ಲಕ್ಷ್ಮೀಪುರ-ಹೆಬ್ಬಂಡಿ -ವಿಧ್ಯಾಧಿರಾಜ ಕಲ್ಯಾಣ ಮಂಟಪ್ಪ -ಐಟಿಐ ಮಾರ್ಗವಾಗಿ ಭದ್ರಾವತಿ ಬಸ್‌ ನಿಲ್ದಾಣ ಹಾಗೂ ಕೆಎಸ್ ಆರ್ ಟಿ ಸಿ ಬಸ್ ಗಳು, ಲಾರಿ,ಟ್ರಕ್, ವಾಹನ ಹಾಗೂ ಭಾರಿ ವಾಹನಗಳು ಅಂಡರ್ ಬ್ರಿಡ್ಜ್ – ಉಂಬ್ಳೆಬೈಲ್ ರಸ್ತೆ-ಕೃಷ್ಣಪ್ಪ ಸರ್ಕಲ್ ತಲುಪಿ ರಾಷ್ಟ್ರೀಯ ಹೆದ್ದಾರಿ 69ರ ಮೂಲಕ ಸಂಚರಿಸಬಹುದಾಗಿದೆ.

ದಿನಾಂಕ: 5.12.2023 ರ ಬೆಳಗ್ಗೆ 8-00 ಗಂಟೆಯಿಂದ ದಿನಾಂಕ: 7.12.20230 ಸಂಜೆ 6-00 ಗಂಟೆಯವರೆಗೆ ರೈಲ್ವೆ ಕ್ರಾಸಿಂಗ್ ಬಂದ್ ಮಾಡಲಾಗಿದೆ.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವರದಿಯ ಆಧಾರದ ಮೇರೆಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಈ ಮಾರ್ಗಗಳನ್ನ ಉಲ್ಲೇಖಿಸಿ ಎರಡು ದಿನ ರೈಲ್ವೆ ಕ್ರಾಸಿಂಗ್ ತಾತ್ಕಾಲಿಕ ಬಂದ್ ಗೆ ಆದೇಶಿಸಿದ್ದಾರೆ.

ವರದಿ : ಲಿಂಗರಾಜ್ ಗಾಡಿಕೊಪ್ಪ


Leave a Reply

Your email address will not be published.