ನಾಳೆಯಿಂದ ರಾಜ್ಯಮಟ್ಟದ ವಿದ್ಯುತ್ ಇಲಾಖೆಯ ಕ್ರಿಕೆಟ್ ಪಂದ್ಯಾವಳಿ

ನಾಳೆಯಿಂದ ರಾಜ್ಯಮಟ್ಟದ ವಿದ್ಯುತ್ ಇಲಾಖೆಯ ಕ್ರಿಕೆಟ್ ಪಂದ್ಯಾವಳಿ

ಶಿವಮೊಗ್ಗ : ಕರ್ತವ್ಯದಲ್ಲಿ ಮೃತಪಟ್ಟ ಮೆಸ್ಕಾಂ ಪವರ್ ಮ್ಯಾನ್ ಅವರ ಸ್ಮರಣಾರ್ಥ ರಾಜ್ಯಮಟ್ಟದ ವಿದ್ಯುತ್ ಇಲಾಖೆ ನೌಕರರ ಕ್ರಿಕೆಟ್ ಪಂದ್ಯಾವಳಿಯನ್ನು ಡಿ. 09 ಹಾಗೂ 10ರಂದು ಜೆಎನ್‌ಎನ್‌ಸಿ ಕಾಲೇಜು ಹಾಗೂ ಕೃಷಿ ಕಾಲೇಜಿನ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಲೀಗ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಗೆ ರಾಜ್ಯದ 24 ತಂಡಗಳು ಹೆಸರು ನೊಂದಾಯಿಸಿವೆ.

ಬಲರಾಮ್ ಅಭಿಮಾನಿಗಳ ಸಂಘ ಮೆಸ್ಕಾಂ ಶಿವಮೊಗ್ಗ, ಹೆಚ್ ಈರಪ್ಪ ಗ್ರಾಮೀಣಾಭಿವೃದ್ಧಿ ಎಜುಕೇಷನ್ ಟ್ರಸ್ಟ್ ಹಾಗೂ ರಾಜೀವ್‌ ಗಾಂಧಿ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಗಳ ಆಶ್ರಯದಲ್ಲಿ ಈ ಪಂದ್ಯಾವಳಿಗಳು ನಡೆಯಲಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಡಿ. 09ರ ಬೆಳಗ್ಗೆ 10 ಗಂಟೆಗೆ ಜೆಎನ್ ಎನ್‌ಸಿಇ ಕಾಲೇಜು ಕ್ರೀಡಾಂಗಣದಲ್ಲಿ ಶಿವಮೊಗ್ಗ ಕಾರ್ಯಪಾಲಕ ಅಭಿಯಂತರ ವಿರೇಂದ್ರ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಎಇಇ ಫಣೀಂದ್ರ, ಮೆಸ್ಕಾಂನ ಅಧಿಕಾರಿಗಳು ವಿವಿಧ ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಜಾಹಿರಾತು :

ಈ 24 ತಂಡಗಳು ತಲಾ 5 ರಿಂದ 6 ಪಂದ್ಯಗಳಲ್ಲಿ ಭಾಗವಹಿಸಲಿದ್ದು, ಡಿ.10ರ ಸಂಜೆ 4 ಗಂಟೆಗೆ ಮೆಸ್ಕಾಂ ನ ಅಧಿಕ್ಷಕ ಅಭಿಯಂತರರಾದ ಶಶಿಧರ್, ಕರ್ನಾಟಕ ವಿದ್ಯುತ್ ಪ್ರಸರಣ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಬಲರಾಮ್, ಉಪಾಧ್ಯಕ್ಷ ಮೋಹನ್, ಮೆಸ್ಕಾಂ ಎಸ್ಸಿಎಸ್ಟಿ ಕಲ್ಯಾಣ ಸಮಿತಿಯ ಅಧ್ಯಕ್ಷ ಹೆಚ್.ಬಿ. ಜಗ ದೀಶ್, ಉಪಾಧ್ಯಕ್ಷ ವಸಂತ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಯಶವಂತ್ ನಾಯ್ಕ, ಈರಪ್ಪ ಟ್ರಸ್ಟ್‌ನ ಅಧ್ಯಕ್ಷ ಸುರೇಶ್, ರಾಜೀವ್‌ ಗಾಂಧಿ ಟ್ರಸ್ಟ್‌ನ ಅಧ್ಯಕ್ಷ ಭಗವಾನ್‌ ಸೇರಿದಂತೆ ವಿವಿಧ ಗಣ್ಯರು ಆಗಮಿಸಲಿದ್ದಾರೆ.

ಈ ಸಂದರ್ಭದಲ್ಲಿ ಪ್ರಸಕ್ತ 2023ರ ಅವಧಿಯಲ್ಲಿ ಕರ್ತವ್ಯ ನಿರತರಾಗಿ ವಿದ್ಯುತ್ ಅವಕೃಪೆಗೆ ಒಳಗಾದ ಐವರು ಪವರ್ ಮ್ಯಾನ್‌ಗಳ ಕುಟುಂಬದವರಿಗೆ ಆತ್ಮೀಯವಾಗಿ ಸನ್ಮಾನಿಸಿ ಸಾಂತ್ವಾನ ನೀಡುವ ಕಾರ್ಯಕ್ರಮ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೊಂದಾಯಿಸಲು 9980543829, 9611948975, 9986202626, 8880037088, 9448977686

ವರದಿ : ಲಿಂಗರಾಜ್ ಗಾಡಿಕೊಪ್ಪ


Leave a Reply

Your email address will not be published.