ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕಷ್ಟವಾಗ್ತಿದೀಯಾ ವಿಮಾನ ಲ್ಯಾಂಡಿಂಗ್ ? ಗೋವ ಟ್ರಿಪ್ ಕ್ಯಾನ್ಸಲ್ ಆಗಿದ್ದೀಕೆ ? ನಿಗದಿತ ಸಂಚಾರಕ್ಕೆ ತಡವಾಗುತ್ತಿದಿಯಾ ?

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕಷ್ಟವಾಗ್ತಿದೀಯಾ ವಿಮಾನ ಲ್ಯಾಂಡಿಂಗ್ ? ಗೋವ ಟ್ರಿಪ್ ಕ್ಯಾನ್ಸಲ್ ಆಗಿದ್ದೀಕೆ ? ನಿಗದಿತ ಸಂಚಾರಕ್ಕೆ ತಡವಾಗುತ್ತಿದಿಯಾ ?

ಶಿವಮೊಗ್ಗ : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ವಿಮಾನದ ಲ್ಯಾಂಡಿಂಗ್ ಹಾಗೂ ಹಾರಾಟಕ್ಕೆ ಸಮಸ್ಯೆಯಾದಂತಹ ಕೆಲವು ಘಟನೆಗಳ ಬಗ್ಗೆ ವರದಿಯಾಗಿದೆ. ಕೆಲ ತಿಂಗಳುಗಳ ಹಿಂದಷ್ಟೇ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ ವಿಮಾನ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿ ಆಕಾಶದಲ್ಲೆ ಸುತ್ತು ಹೊಡೆದ ಘಟನೆ ನಮ್ಮ ಕಣ್ಣ ಮುಂದೆಯೇ ಇದೆ. ಅದಲ್ಲದೆ ಈಗ ಮತ್ತೊಂದು ಘಟನೆ ವರದಿಯಾಗಿದ್ದು.

ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲು ಕಷ್ಟವಾಗುತ್ತೀದೆ. ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರಿಗೆ ನಿಗದಿತ ಸಂಚಾರಕ್ಕೆ ತಡವಾಗುತ್ತಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

 ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ದಟ್ಟವಾದ ಮಂಜು ಆವರಿಸಿರುವ ಕಾರಣ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಮಸ್ಯೆ ಎದುರಾಗುತ್ತಿದೆ. ಶುಕ್ರವಾರ ಮಧ್ಯಾಹ್ನ ಮಂಜು ಕವಿದ ವಾತಾವರಣ ಇದ್ದ ಕಾರಣ ಬೆಂಗಳೂರಿನಿಂದ ಶಿವಮೊಗ್ಗಕ್ಕೆ 11.05ಕ್ಕೆ ಆಗಮಿಸಬೇಕಿದ್ದ ವಿಮಾನ ಮಧ್ಯಾಹ್ನ 1.48ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. 2 ಗಂಟೆ 43 ನಿಮಿಷ ವಿಮಾನ ತಡವಾಗಿ ಬಂದಿದ್ದು ನಿಗದಿತ ಸಂಚಾರಕ್ಕೆ ತಡವಾಗುತ್ತಿದೆ.

ಇನ್ನೂ 8 ತಾರೀಖ್ ಶುಕ್ರವಾರ ಗೋವಾಗೆ ಹೊರಡಬೇಕಿದ್ದ ವಿಮಾನ ಸಂಚಾರವು ರದ್ದಾಗಿದೆ, ಇದಲ್ಲದೆ ಹೈದರಾಬಾದ್‌ನಿಂದ ಶಿವಮೊಗ್ಗಕ್ಕೆ 10.35ಕ್ಕೆ ಬರಬೇಕಿದ್ದ ಸ್ಟಾರ್‌ ಏರ್‌ ಲೈನ್ ವಿಮಾನ ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಿದೆ. ಇದೇ ವಿಮಾನ ತಿರುಪತಿ ಮತ್ತು ಗೋವಾಗೆ ಹೊರಡಬೇಕಿತ್ತು ಆದರೆ ಹೈದರಾಬಾದ್ ನಿಂದ ಶಿವಮೊಗ್ಗಕ್ಕೆ ತಡವಾಗಿ ಬಂದಿದ್ದ ಕಾರಣ ಗೋವಾ ವಿಮಾನ ಸಂಚಾರ ರದ್ದಾಗಿದೆ.

 ಈಗ ಚಳಿಗಾಲ ಶುರುವಾಗಿದ್ದು ಇನ್ನಷ್ಟು ದಟ್ಟವಾದ ಮಂಜು ಆವರಿಸುವ ಸಾಧ್ಯತೆ ಇರುವ ಕಾರಣ , ಮುಂದಿನ ದಿನಗಳಲ್ಲಿ ವಿಮಾನ ಲ್ಯಾಂಡಿಂಗ್ ಮತ್ತಷ್ಟು ಕಷ್ಟವಾಗುವ ಸಂಭವ ಇದೆ

ವರದಿ : ಲಿಂಗರಾಜ್ ಗಾಡಿಕೊಪ್ಪ

ಜಾಹಿರಾತು :


Leave a Reply

Your email address will not be published.