ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ ! ಹುದ್ದೆ ಏನು ? ಅರ್ಹತೆಗಳೇನು ?

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ ! ಹುದ್ದೆ ಏನು ? ಅರ್ಹತೆಗಳೇನು ?

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶಕ್ಕಾಗಿ ಹಲವರು ಇವತ್ತಿಗೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ನಡುವೆ ವಿಮಾನ ನಿಲ್ದಾಣದ ಉಸ್ತುವಾರಿ ನೋಡಿಕೊಳ್ಳುವ; ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಐಐಡಿಸಿ) ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಒಂದು ಹುದ್ದೆಯನ್ನು ಭರ್ತಿ ಮಾಡುವ ಸಲುವಾಗಿ ನೇರ ಸಂದರ್ಶನಕ್ಕೆ ಬರುವಂತೆ ಆಹ್ವಾನಿಸಿದೆ. 

ಆಸಕ್ತರು ಡಿಸೆಂಬರ್ 19ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. 1 ವರ್ಷದ ಅವಧಿ (ಗುತ್ತಿಗೆ ಆಧಾರ) ಮೇಲೆ ಸಿಬ್ಬಂದಿಯನ್ನು ನೇಮಕ ಮಾಡಲು ಉದ್ದೇಶಿಸಿದೆ.

ಹುದ್ದೆಯ ವಿವರ

ಹುದ್ದೆ : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ನಿರ್ದೇಶಕರು(ಒಂದು ಹುದ್ದೆ)

ವಿದ್ಯಾರ್ಥತೆ ಮತ್ತು ಅನುಭವ

ಅಭ್ಯರ್ಥಿಗಳು ಬಿಜಿನೆಸ್, ಏವಿಯೇಷನ್ ಅಡ್ಡಿನಿಸ್ಟ್ರೇಷನ್/ ಇಂಜಿನಿಯರಿಂಗ್‌ನಲ್ಲಿ ಅಥವಾ ಸಂಬಂಧಪಟ್ಟ ಕ್ಷೇತ್ರದಲ್ಲಿ ಬ್ಯಾಚುಲರ್ಸ್ ಪದವಿ ಪಡೆದಿರಬೇಕು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಕಾರ್ಯನಿರ್ವಾಹಕರಾಗಿ, ವೃತ್ತಿ ಮಟ್ಟದ ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ 10 ವರ್ಷಗಳ ಅನುಭವ ಹೊಂದಿರಬೇಕು.

ಅಭ್ಯರ್ಥಿಯು ಅಂಗೀಕರಿಸಬಹುದಾದ ಚಾಲನಾ ದಾಖಲೆಯೊಡನೆ ರಾಜ್ಯ ಚಾಲಕರ ಪರವಾನಗಿ ಹೊಂದಿರಬೇಕು.

ಪೈಲೆಟ್ ಪರವಾನಗಿಯನ್ನು ಹೊಂದಿದ್ದರೆ ಆದ್ಯತೆ ನೀಡಲಾಗುವುದು.

ಅಭ್ಯರ್ಥಿಗಳು ಕೆಳಕಂಡ ವಿಷಯಗಳ ಪರಿಶೀಲನೆಯಲ್ಲಿ ಪರಿಣಿತರಾಗಿರಬೇಕು

ಡಿಜಿಸಿಎ ಅನುಸಾರ ಫೈಟ್ ಸೇಫ್ಟಿ ಡಾಕ್ಯುಮೆಂಟೇಶನ್ ಸಿಸ್ಟಂನ ಅನುಷ್ಠಾನ ಮತ್ತು ನಿರ್ವಹಣೆ.

ಏರ್‌ಸೈಡ್ ಇನ್‌ಫ್ರಾಸ್ಟಕ್ಟರ್, ಟರ್ಮಿನಲ್ ಸಿಸ್ಟಮ್ಸ್,

ಏರೋಸ್ಪೇಸ್ ಡೊಮಿನಿಯನ್‌ನಲ್ಲಿ ಸಿಸ್ಟಮ್ಸ್ ಸುರಕ್ಷತೆ ಅಗತ್ಯತೆಗಳ ಅಭಿವೃದ್ಧಿ ಮತ್ತು ಪರಿಶೀಲನೆ

ಏರ್ ಟ್ರಾಫಿಕ್ ಕಂಟ್ರೋಲ್ ಕ್ರಮಾವಳಿಗಳ ಕಾರ್ಯಾಚರಣೆ

ವಿಮಾನ ಮತ್ತು ವಿಮಾನ ನಿಲ್ದಾಣ ಕಾರ್ಯಾಚರಣೆ ಕೈಪಿಡಿಗಳು, ಡಿಜಿಸಿ ಅನುಮೋದನೆ ಪಡೆದ ನಂತರ ಪರಿಷ್ಕರಣೆಗಳು ಮತ್ತು ತಿದ್ದುಪಡಿಗಳ ಸೇರ್ಪಡೆ ಮಾಡುವುದು.

ವೇತನ : 1,25,000

ವಯೋಮಿತಿ: ಕನಿಷ್ಟ 35, ಗರಿಷ್ಟ 55 

ಅರ್ಹ, ಆಸಕ್ತಿಯುಳ್ಳ ಅಭ್ಯರ್ಥಿಗಳು ಮೂಲ ಪತ್ರಗಳ ಜೊತೆಗೆ ಅಂಕಪಟ್ಟಿಗಳು ಮತ್ತು ಅನುಭವದ ವಿವರಗಳನ್ನು ಒಳಗೊಂಡ ಅರ್ಜಿಯೊಡನೆ ಕೆಎಸ್‌ಐಐಡಿಸಿ, ಬೆಂಗಳೂರು ಇಲ್ಲಿ ದಿನಾಂಕ 19ನೇ ಡಿಸೆಂಬರ್ 2023 ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ ಎಂದು ತಿಳಿಸಲಾಗಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.