ನವಜಾತ ಹೆಣ್ಣು ಶಿಶುವಿನ ಮೃತದೇಹ ಪತ್ತೆ !
ಹೊನ್ನಾಳಿ : ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ಅಂಬೇಡ್ಕರ್ ಹೊಸ ಬಡಾವಣೆ ಸಮೀಪ ನವಜಾತ ಹೆಣ್ಣು ಶಿಶುವಿನ ಮೃತ ದೇಹ ಪತ್ತೆಯಾಗಿದೆ.
ಬೆಳಿಗ್ಗೆ ಸುಮಾರು 8 ಗಂಟೆ ಸಮಯದಲ್ಲಿ ನವಜಾತ ಹೆಣ್ಣು ಶಿಶುವಿನ ಮೃತ ದೇಹ ಪತ್ತೆಯಾಗಿದ. ಹೆರಿಗೆಯಾದ ನಂತರ ನವಜಾತ ಹೆಣ್ಣು ಶಿಶುವನ್ನು ಹತ್ಯೆ ಮಾಡಿ ಬಿಟ್ಟು ಹೋಗಲಾಗಿದೆ ಎಂಬ ಸಂಕೆ ವ್ಯಕ್ತವಾಗಿದೆ.
ಸಾಸ್ವೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಾಸ್ವೆಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಶಿವಮೊಗ್ಗ ಎಕ್ಸ್ ಪ್ರೆಸ್ ನ್ಯೂಸ್ ಗೆ ಲಭ್ಯವಾಗಿದೆ
ವರದಿ : ನಾಗರಾಜ್ ಬಿ ಆರ್, ಕ್ಯಾಸಿನಕೆರೆ
Leave a Reply