ಜಿಂಕೆ ಶಿಕಾರಿ ! ಓರ್ವನ ಬಂಧನ ! ಮೂವರು ನಾಪತ್ತೆ ! ಮಂಡಗದ್ದೆ ಅರಣ್ಯ ವಲಯದ ವ್ಯಾಪ್ತಿಯಲ್ಲಿ ನಡೆದಿದ್ದೇನು ?
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಜಿಂಕೆ ಶಿಕಾರಿಯನ್ನು ಮಾಡಿದ ಮಾಹಿತಿಯನ್ನು ಆಧರಿಸಿ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಓರ್ವನನ್ನು ಅರೆಸ್ಟ್ ಮಾಡಿದ್ದಾರೆ.
ಮಂಡಗದ್ದೆ ಅರಣ್ಯ ವಲಯದ ಗ್ರಾಮವೊಂದರಲ್ಲಿ ಜಿಂಕೆ ಶಿಕಾರಿ ಆಗಿದೆ ಎಂಬ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗಳು ಅರಣ್ಯ ಅಧಿಕಾರಿಗಳಿಗೆ ಕೊಟ್ಟಿದ್ದಾರೆ, ಮಾಹಿತಿಯ ಮೂಲವನ್ನು ಆಧರಸಿ ದಾಳಿ ಮಾಡಿದ ಅರಣ್ಯ ಅಧಿಕಾರಿಗಳು ಓರ್ವನನ್ನು ಬಂಧಿಸಿದ್ದಾರೆ. ಇನ್ನೂ ಉಳಿದ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ , ಬಂಧನವಾದ ವ್ಯಕ್ತಿ ತಮಿಳುನಾಡು ಮೂಲದವನು ಎಂಬ ಮಾಹಿತಿ ಲಭ್ಯವಾಗಿದೆ.
ದಾಳಿ ಮಾಡುವ ಸಂದರ್ಭದಲ್ಲಿ ಡಿಸಿಎಫ್ ಶಿವಶಂಕರ್, ಎಸಿಎಫ್ ಪ್ರಕಾಶ್ ಮಾರ್ಗದರ್ಶನದಲ್ಲಿ ತಂಡ ಕಾರ್ಯಾಚರಣೆ ನಡೆಸಿದೆ. ಡಿಆರ್ ಎಫ್ಓ ಸುಹಾಸ್, ಗಸ್ತು ಅರಣ್ಯ ಪಾಲಕರಾದ ದುರುಗಪ್ಪ, ಮಹಾದೇವ ಕಣ್ಣೂರ, ವಾಹನ ಚಾಲಕ ನವೀನ್ ಮುಂತಾದವರು ಇದ್ದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply