ಶಬರಿಮಲೆಯಿಂದ ವಾಪಸ್ ಆಗುವ ಭಕ್ತರು ಹೋಂ ಐಸೋಲೇಷೆನ್ ಆಗುವಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ ರಾಜೇಶ್ ಸೂಚನೆ !
ಶಿವಮೊಗ್ಗ : ದೇಶಾದ್ಯಂತ ಮತ್ತೆ ಕೊರೋನ ಮಹಾಮಾರಿಯ ಅಟ್ಟಹಾಸ ಶುರುವಾಗಿದೆ. ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ನೆರೆಯ ರಾಜ್ಯ ಕೇರಳದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಮೊಗ್ಗ ಜಿಲ್ಲಾ ಆರೋಗ್ಯ ಅಧಿಕಾರಿಗಳು ಡಾ ರಾಜೇಶ್ ಮುಂಜಾಗ್ರತಾ ಕ್ರಮವಾಗಿ ಶಬರಿಮಲೆಯಿಂದ ವಾಪಸ್ ಆಗುವ ಭಕ್ತರು ಹೋಂ ಐಸೋಲೇಷೆನ್ ಆಗುವಂತೆ ಸೂಚನೆ ನೀಡಿದ್ದಾರೆ.
ಈ ಸಮಯದಲ್ಲಿ ವೈರಲ್ ಫ್ಯುವರ್ ಜಾಸ್ತಿ ಇರುವ ಕಾರಣ, ಜ್ವರ ಬರುವುದು ಸಾಮಾನ್ಯ, ಜ್ವರ ಬಂದರೆ ಸಾರ್ವಜನಿಕರು ವೈದ್ಯರ ಸೂಚನೆ ಇಲ್ಲದೆ ಔಷಧಿಗಳನ್ನ ಖರೀದಿಸಬಾರದು, ಮತ್ತು 24 ಗಂಟೆಯ ಒಳಗೆ ಜ್ವರ ಕಡಿಮೆಯಾಗದಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಮತ್ತು ಜ್ವರ ಬಂದವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವುದನ್ನು ನಿಯಂತ್ರಣ ಮಾಡಬೇಕು ಎಂದು ಸೂಚಿಸಿದ್ದಾರೆ
ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ 1200 ಬೆಡ್ ಇದೆ. 1 ಸಾವಿರ ಬೆಡ್ ಗೆ ಆಕ್ಸಿಜನ್ ಇದೆ. 35 ಐಸಿಯು ಬೆಡ್ ಇದೆ. ಶಿವಮೊಗ್ಗ ಜಿಲ್ಲೆಯ ತಾಲುಕು ಆಸ್ಪತ್ರೆಗಳಲ್ಲು ಆಕ್ಸಿಜನ್ ಬೆಡ್ ಇದೆ. ಎಂದು ಹೇಳಿದ್ದಾರೆ
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply