“ರತ್ನಾಕರವರ್ಣಿಯ ಭರತೇಶ ವೈಭವ-ಮರು ಓದು” ರಾಜ್ಯ ಮಟ್ಟದ ವಿಚಾರ ಸಂಕೀರಣ ಉದ್ಘಾಟನೆ 

ರತ್ನಾಕರವರ್ಣಿಯ ಭರತೇಶ ವೈಭವ-ಮರು ಓದು” ರಾಜ್ಯ ಮಟ್ಟದ ವಿಚಾರ ಸಂಕೀರಣ ಉದ್ಘಾಟನೆ 

ಶಿವಮೊಗ್ಗ : ಮಹಾಕವಿ ರತ್ನಾಕರವರ್ಣಿ ಅಧ್ಯಯನ ಕೇಂದ್ರಮಂಗಳೂರು ವಿಶ್ವವಿದ್ಯಾಲಯ ಹಾಗು ಕನ್ನಡ ವಿಭಾಗ, ಸಹ್ಯಾದ್ರಿ ವಿಜ್ಞಾನ ಕಾಲೇಜು ಶಿವಮೊಗ್ಗ ಇವರ ಸಹಯೋಗದಲ್ಲಿ “ರತ್ನಾಕರವರ್ಣಿಯ ಭರತೇಶ ವೈಭವ-ಮರು ಓದು” ರಾಜ್ಯಮಟ್ಟದ ವಿಚಾರ ಸಂಕಿರಣವು ಪಾಥ್ವ್ಸೇ ಸಭಾಂಗಣದಲ್ಲಿ ನಡೆಯಿತು, ಕಾರ್ಯಕ್ರಮವನ್ನು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಮತ್ತು ಜಾನಪದ ತಜ್ಞರಾದ ಪ್ರೊ ಬಸವರಾಜ ನೆಲ್ಲಿಸರ. ಉದ್ಘಾಟಿಸಿ ರತ್ನಾಕರ ಭರತೇಶವೈಭವ ಕೃತಿ ರಚಿಸುವಲ್ಲಿ ಜೈನ ಮತ್ತು ವೀರಶೈವ ಧರ್ಮವನ್ನು ಸಮನ್ವಯಪಡಿಸಿ ಬರೆಯುವಲ್ಲಿ ಯಶಸ್ವಿಯಾಗಿದ್ದಾನೆ ಇವನ ಕಾವ್ಯವು ಶಾಂತಿಯುತವಾದ ಯುದ್ಧ ಸಾರಿದ್ದು ಇವತ್ತಿಗೂ ಪ್ರಸ್ತುತ ಎಂದರು.ಪ್ರಬುದ್ಧ ಚಿಂತಕರು, ವಿಮರ್ಶಕರಾದ ಪ್ರೊ ಕೇಶವಶರ್ಮ ಅವರು ಆಶಯ ನುಡಿಯಲ್ಲಿ ಭರತನ ಭೋಗಯೋಗದ ತೊಡಕು,ಸಮನ್ವಯಗಳನ್ನು ಮಹಾಕವಿ ರತ್ನಾಕರ ಸಾಧಿಸಿದ್ದು ಮಹತ್ವದ್ದಾಗಿದೆ ಎಂದರು, ಪ್ರಾಸ್ಥಾವಿಕವಾಗಿ ಮಾತಾಡಿದ ರತ್ನಾಕರವರ್ಣಿಯ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ ಸೋಮಣ್ಣ ಹೊಂಗಳ್ಳಿಯವರು ಸಹ್ಯಾದ್ರಿ ಕಾಲೇಜು ಸುಮಾರು 8000 ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳನ್ನು ಒಳಗೊಂಡ ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದ್ದು ಇಂತಹ ಕಾಲೇಜಿನಲ್ಲಿ ರತ್ನಾಕರನ ಭರತೇಶ ಕೃತಿಯನ್ನು ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದ್ದು ಪ್ರಸ್ತುತ ವಿದ್ಯಮಾನಗಳಿಗೆ ಸ್ಪಂದಿಸಿದ್ದಂತಾಯಿತು

.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ ಎನ್ ರಾಜೇಶ್ವರಿ ವಹಿಸಿದ್ದರು.ಸಂಚಾಲಕರಾದ ಡಾ ಹಾ ಮ ನಾಗಾರ್ಜುನ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ೨ ವಿಚಾರ ಗೋಷ್ಠಿ ನಡೆದವು ಮೊದಲ ಗೋಷ್ಠಿಯಲ್ಲಿ ಡಾ ಮಂಜುನಾಥ ಎಂ ಎಂ,ಡಾ ರಣಧೀರ,ಡಾ ಹಾ ಮ ನಾಗಾರ್ಜುನ, ಡಾ ಎಸ್ ಎಂ ಮುತ್ತಯ್ಯ,ಹಾಗು ಜ್ಯೋತಿಪ್ರಿಯ ರತ್ನಾಕರನ ಭರತೇಶ ವೈಭವ ಕುರಿತು ಆತನ ಸಂಯಮ,ಪ್ರಕೃತಿ,ಶಾಂತಿ,ಯುದ್ಧದ ಬಗ್ಗೆ ಪ್ರಬಂಧ ಮಂಡಿಸಿದರು.    

ಎರಡನೆ ಗೋಷ್ಠಿಯಲ್ಲಿ ಡಾ ನೆಲ್ಲಿಕಟ್ಟೆ ಎಸ್, ಸಿದ್ದೇಶ್,ಡಾ.ವಸಂತಕುಮಾರ,ಡಾ ಕೆ ಸಿ ಶಿವಣ್ಣ,ಶ್ರೀ ಸತೀಶ್ ಇವರುಗಳು ಭರತನ ಕಿರುಬೆರಳ ಸೆಟೆ,ದಿಗ್ವಿಜಯ,ಶಾಂತಿಸಂಯಮ,ಮಹಿಳೆ ಮತ್ತು ಮಕ್ಕಳ ಕುರಿತು ಹಾಗು ಭರತನ ಭೋಗಯೋಗದಲ್ಲಿ ತೊಂಬತ್ತಾರು ಸ್ತ್ರೀಯರನ್ನು ಒಳಗೊಂಡಿದ್ದು ಸಮನ್ವಯಗೊಳಿಸಿದ ಕವಿ ರತ್ನಾಕರವರ್ಣಿ ಎಂದರು.

ಕಾರ್ಯಕ್ರಮವನ್ನು ತನುಷ,ಐಶ್ವರ್ಯ ಟಿ ಮತ್ತು ಐಶ್ವರ್ಯ, ಹರ್ಷಿಣಿ ನಿರೂಪಿಸಿದರು.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.