BREAKING NEWS : ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್ ಹ್ಯಾಕ್ !
ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಲಾಗಿದೆ. ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬೈಟ್ ನಿನ್ನೆ ರಾತ್ರಿ ವೇಳೆಗೆ ಹಾಕರ್ಸ್ ಹ್ಯಾಕ್ ಮಾಡಿದ್ದಾರೆ.
ಪ್ರೋ ಪ್ಯಾಲೆಸ್ಟೈನ್ ರಿಂದ ಕುವೆಂಪು ವಿವಿ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ. ವೆಬ್ ಸೈಟ್ ಹ್ಯಾಕ್ ಮಾಡಿರುವ ಕಲೀಮಲ್ಯಾಂಗ್ ಬ್ಲಾಕ್ ಹ್ಯಾಟ್ ಟೀಂ. ಸೇವ್ ಪ್ಯಾಲೆಸ್ಟೈನ್- ಇಸ್ರೇಲ್ ಡಾಗ್ ಎಂದು ವೆಬ್ ಸೈಟ್ ನಲ್ಲಿ ಉಲ್ಲೇಖ ಮಾಡಲಾಗಿದೆ.
ಹ್ಯಾಕ್ ಆದ ಬಳಿಕ ವೆಬ್ ಸ್ಥಗಿತಗೊಳಿಸಿದ ವಿವಿ ಟೆಕ್ನಿಕಲ್ ಟೀಂ. ಪ್ರಸ್ತುತ ಓಪನ್ ಬ್ಲಾಕ್ ಅಗಿರುವ ಕುವೆಂಪು ವಿವಿಯ ವೆಬ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲು ವಿವಿಯಿಂದ ತಯಾರಿ ಮಾಡಲಾಗಿದೆ.
2018 ರಲ್ಲೂ ಹ್ಯಾಕ್ ಆಗಿತ್ತು ಕುವೆಂಪು ವಿವಿ ಯ ವೆಬ್ ಸೈಟ್,
2018ರ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಜೋಗನ್ ಶಂಕರ್ ಅವರ ಅವಧಿಯಲ್ಲೂ ಅಧಿಕೃತ ವೆಬ್ಸೈಟ್ ಹ್ಯಾಕ್ ಆಗಿತ್ತು.ಹ್ಯಾಕ್ ಹಾಕಿದ್ದ ವಿವಿ ವೆಬ್ಸೈಟಿನ ಮುಖಪುಟದಲ್ಲಿ ‘ಹಂಟರ್ ಬಜ್ವಾ’ ಎಂಬ ಹೆಸರಿತ್ತು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply