ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ಮುನ್ನ ಇರಲಿ ಎಚ್ಚರ ! ಕ್ಯಾಮೆರಾ ಕಣ್ಣಿಗೆ ಸೆರೆಯಾದ ಸ್ಕೂಟಿ ಮೇಲೆ ಬಿತ್ತು ಬರೋಬ್ಬರಿ 11,500 ದಂಡ !
ಶಿವಮೊಗ್ಗ : ನಗರದಲ್ಲಿ ಸ್ಮಾರ್ಟ್ಸಿಟಿಯ ಐಟಿಎಂಎಸ್(ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ) ಮೂಲಕ ಆ.28ರಿಂದ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಸ್ಮಾರ್ಟ್ಸಿಟಿ ಸಹಯೋಗದಲ್ಲಿ ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದೆ.
ಈಗಾಗಲೇ ಹಲವು ವಾಹನಗಳಿಗೆ ಹೆಲ್ಮಟ್ ಧರಿಸದೇ ಓಡಿಸುವುದು, ಮದ್ಯ ಸೇವಿಸಿ ವಾಹನ ಚಲಾವಣೆ, ಅಜಾಗಕರೂಕತೆ ಮತ್ತು ಅತಿವೇಗ ತಡೆ ಸೇರಿದಂತೆ ವಿವಿಧ ಬಗೆಯ ಸಂಚಾರ ನಿಯಮ ಉಲ್ಲಂಘನೆಯ ನೋಟಿಸ್ಗಳು ರವಾನೆಯಾಗಿವೆ.
ಇಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಸಂಚಾರ ನಿಯಮವನ್ನು ಪಾಲಿಸದ, ಕ್ಯಾಮರಾ ಕಣ್ಣಿಗೆ ಸೆರೆಯಾದ ವಾಹನಗಳನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಕೆಲಸವು ಆಗುತ್ತಿದೆ.
ನೆನ್ನೆಯ ದಿನ ಶಿವಮೊಗ್ಗ ನಗರದ ಸ್ಕೂಟಿ KA14EZ***1 ಮೇಲೆ ಬರೋಬ್ಬರಿ 11500/- ದಂಡ ವಿಧಿಸಿದೆ. ಸ್ಕೂಟಿ 11 ಸಂಚಾರ ನಿಯಮಗಳನ್ನ ಉಲ್ಲಂಘಿಸಿದ್ದು. ಟ್ರಾಫಿಕ್ ನಿಯಮ ಪಾಲಿಸದ ಸ್ಕೂಟಿ ಮೇಲೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಸದರಿ ವಾಹನವನ್ನು ಪಿಸಿ 1583 ಹನುಮಂತ ಸಿ ಹಂಚಿನಾಳ್ ರವರು ಪತ್ತೆ ಮಾಡಿದ್ದು ಸದರಿ ವಾಹನದ ಸವಾರ ವಿತೌಟ್ ಹೆಲ್ಮೆಟ್ , ಸಿಗ್ನಲ್ ಜಂಪ್ ತ್ರಿಬಲ್ ರೈಡಿಂಗ್ ಸೇರಿದಂತೆ ಒಟ್ಟು 11 ಸಂಚಾರ ನಿಮಯ ಉಲ್ಲಂಘಿಸಿದ್ದು ₹ 11500/- ದಂಡ ವಿಧಿಸಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply