ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಪರಿಚಯವಾದ ಮಹಿಳೆ ! ಲಾಡ್ಜ್ ಗೆ ಕರೆದೊಯ್ದಳು ! ತಿಂಡಿ ತರುವಷ್ಟರಲ್ಲಿ ಹಣ, ಚಿನ್ನ ದೋಚಿ ಮಹಿಳೆ ಪರಾರಿ ! ಏನಿದು ಪ್ರಕರಣ ?
ಶಿವಮೊಗ್ಗ : ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಅಲ್ಲಿ ಆಗಾಗ ಸರಗಳ್ಳತನ ಪ್ರಕರಣಗಳು, ಹಣ ಕಳವು ಪ್ರಕರಣಗಳು, ಬ್ಯಾಗ್ ಮಿಸ್ಸಿಂಗ್ ಪ್ರಕರಣಗಳು ನಡೆಯುತ್ತಿರುತ್ತೇವೆ. ಇವುಗಳ ಜೊತೆಗೆ ವಿಚಿತ್ರ ಪ್ರಕರಣ ಒಂದು ತಳುಕು ಹಾಕಿಕೊಂಡಿದೆ, ಏನಿದು ಪ್ರಕರಣ ?
ಹೊನ್ನಾವರದಿಂದ ಶಿವಮೊಗ್ಗಕ್ಕೆ ಲಾಂಗ್ ಜರ್ನಿಯ ವೇಳೆ ಲಾರಿ ಚಾಲಕನೊಬ್ಬನಿಗೆ ಅಪರಿಚಿತ ಮಹಿಳೆ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಪರಿಚಯವಾಗಿದ್ದಾಳೆ. ಪರಿಚಯವಾದ ಮಹಿಳೆಯನ್ನು ನಂಬಿ ಹಣ, ಚಿನ್ನ, ಕಳೆದುಕೊಂಡಿರುವ ಘಟನೆ ಡಿಸೆಂಬರ್ 15 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಹೊನ್ನಾವರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದಾಗ ಬಸ್ ನಲ್ಲಿ ತಮ್ಮ ಸೀಟ್ ಪಕ್ಕ ಒಬ್ಬ ಮಹಿಳೆ ಬಂದು ಕುಳಿತಿದ್ದಾಳೆ, ಕಾಲ ಕಳೆದ ಹಾಗೆ ಇಬ್ಬರಲ್ಲೂ ಪರಸ್ಪರ ಪರಿಚಯವಾಗಿದೆ, ಇಬ್ಬರು ತಮ್ಮ ತಮ್ಮ ಪರಿಚಯ ಮಾಡಿಕೊಳ್ಳುತ್ತಾರೆ.
ಗಂಡನನ್ನ ಕಳೆದುಕೊಂಡು 8 ತಿಂಗಳಾಗಿದೆ. ಇವತ್ತು ನಿನ್ನ ಜೊತೆ ಮಲಗಬೇಕು ಎಂದು ಹೇಳಿ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಇಳಿದಾಗ ಮಹಿಳೆಯೇ ಲಾಡ್ಜ್ ಗೆ ಕರೆದುಕೊಂಡು ಹೋಗಿ ಕೊಠಡಿಯನ್ನ ಬಾಡಿಗೆಗೆ ಪಡೆದಿದ್ದಾಳೆ.
50 ಸಾವಿರ ನಗದು, ಚಿನ್ನಾಭರಣ, ಬ್ಯಾಗ್ ನಲ್ಲಿ ಹಾಕುವಂತೆ ಮಹಿಳೆ ಸೂಚಿಸುತ್ತಾಳೆ.ಮಹಿಳೆಯ ಸೂಚನೆಯಂತೆ ಚಾಲಕ ತನ್ನ ಹತ್ತಿರ ಇದ್ದ ದುಡ್ಡು, ಚಿನ್ನಾಭರಣ ಬ್ಯಾಗ್ ನಲ್ಲಿ ಹಾಕಿದ್ದಾನೆ ನಂತರ ಮಹಿಳೆ ದುಡ್ಡು ಕೊಟ್ಟು ತಿಂಡಿ ತೆಗೆದುಕೊಂಡು ಬರುವಂತೆ ಚಾಲಕನಿಗೆ ಹೇಳಿದ್ದಾಳೆ. ತಿಂಡಿ ತರಲು ಹೋದ ವ್ಯಕ್ತಿ ಪಾರ್ಸೆಲ್ ತರುವಸ್ಟರಲ್ಲಿ, ಮಹಿಳೆ ಹಣ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾಳೆ. ಮಹಿಳೆಯ ಆಸೆಗೆ ಚಾಲಕ ಹಣ ಚಿನ್ನಾಭರಣ ಕಳೆದು ಕೊಳ್ಳುವಂತಾಗಿದೆ.
ಮಾನ ಮರ್ಯಾದೆ ಪ್ರಶ್ನೆಯೆಂದು ಚಾಲಕ ಎಲ್ಲಿಯೂ ದೂರು ಕೊಡದೆ ಖುದ್ದು ತಾನೇ ಹುಡುಕಿದ್ದಾನೆ, ನಂತರ ಮಹಿಳೆ ಎಲ್ಲಿಯೂ ಸಿಗದ ಕಾರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply