KAS ಹುದ್ದೆಗಳ ನೇಮಕ ಸಂಖ್ಯೆ ಹೆಚ್ಚಿಸಿ ಭರ್ತಿಗೆ ಗ್ರೀನ್ ಸಿಗ್ನಲ್ ! ಅಧಿಸೂಚನೆ ಯಾವಾಗ ?
ಉದ್ಯೋಗ ಸುದ್ದಿ : ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕ ಸಂಖ್ಯೆ ಹೆಚ್ಚಿಸಿ, ಭರ್ತಿಗೆ ಹಸಿರು ನಿಶಾನೆ ನೀಡಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. ಈ ಕುರಿತ ಡೀಟೇಲ್ಸ್ ಇಲ್ಲಿದೆ..
ಕರ್ನಾಟಕ ಸರ್ಕಾರದ 16 ಇಲಾಖೆಗಳಲ್ಲಿ ಖಾಲಿ ಇರುವ ಅಗತ್ಯ ಒಟ್ಟು 656 ಕೆಎಎಸ್ ಗೆಜೆಟೆಡ್ ಹುದ್ದೆಗಳ ಪೈಕಿ 504 ಹುದ್ದೆಗಳಿಗೆ ಆರ್ಥಿಕ ಇಲಾಖೆಯ ಸಮ್ಮತಿ ಸಿಕ್ಕಿತ್ತು. ಆದರೆ ಮೊದಲ ಹಂತದಲ್ಲಿ 276 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಸಿದೆ ಎಂಬ ಮಾಹಿತಿ ಇತ್ತೀಚೆಗೆ ಪ್ರಕಟಿಸಲಾಗಿತ್ತು. ಆದರೆ ಇದೀಗ ಭರ್ಜರಿಯ ಹೊಸ ಗುಡ್ ನ್ಯೂಸ್ ಒಂದು ಕೇಳಿಬಂದಿದೆ.
ಕೆಎಎಸ್ ಆಕಾಂಕ್ಷಿಗಳ ಮನವಿಗೆ ಸ್ಪಂದಿಸಿರುವ ಸಿದ್ದರಾಮಯ್ಯನವರು 276 ರ ಬದಲಿಗೆ 504 ಕರ್ನಾಟಕ ಆಡಳಿತಾತ್ಮಕ ಸೇವೆ (ಕೆಎಎಸ್) ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೂ ಒಂದೇ ಬಾರಿಗೆ ಅಧಿಸೂಚನೆ ಹೊರಡಿಸಿ, ನೇಮಕ ಪ್ರಕ್ರಿಯೆ ಕೈಗೊಳ್ಳಲು ಸಿಎಂ ಹಸಿರು ನಿಶಾನೆ ನೀಡಿದ್ದಾರೆ.
ಹಲವು ವರ್ಷಗಳ ನಂತರ ಕೆಎಎಸ್ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದ ಕಾರಣ, ಸಾವಿರಾರು ಆಕಾಂಕ್ಷಿಗಳು 504 ಹುದ್ದೆಗಳಿಗೂ ನೇಮಕಾತಿ ನಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ ಹುದ್ದೆಯ ಆಕಾಂಕ್ಷಿಗಳು, ಮನವಿಯನ್ನು ಸಲ್ಲಿಸಿದ್ದರು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿಎಂ ರವರು, ಎಲ್ಲಾ 504 ಹುದ್ದೆಗಳ ನೇಮಕಾತಿ ನಡೆಸುವಂತೆ RDPR ಗೆ ಸೂಚನೆ ನೀಡಿದ್ದಾರೆ ಎಂಬುದು ಮೂಲಗಳಿಂದ ತಿಳಿದಿದೆ.
ಅಧಿಸೂಚನೆ ಯಾವಾಗ?
ಈಗಾಗಲೇ 276 ಕೆಎಎಸ್ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪ್ರಸ್ತಾವನೆಯನ್ನು ಕೆಪಿಎಸ್‌ಸಿ ಅಂಗಳಕ್ಕೆ ಕಳುಹಿಸಿದೆ. ಇದೀಗ ಇದನ್ನು ಪರಿಷ್ಕೃತಗೊಳಿಸಿ 504 ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಕೆ ಆಗಬೇಕಿದೆ ಅಷ್ಟೆ. ಈ ಪ್ರಕ್ರಿಯೆ ಬಹುಬೇಗ ಆದಲ್ಲಿ, 2024 ರ ಜನವರಿ ಮಾಸದಲ್ಲಿಯೇ ನೇಮಕ ಅಧಿಸೂಚನೆ ಬರುವ ನಿರೀಕ್ಷೆ ಇದೆ.
ಯಾವ್ಯಾವ ಇಲಾಖೆಯಲ್ಲಿ ಎಷ್ಟು ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳು ಖಾಲಿ ಇವೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ
ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ (ಗ್ರೂಪ್ ಎ) ಖಾಲಿ ಹುದ್ದೆಗಳು
ಡಿಪಿಎಆರ್ (ಸೇವೆಗಳು-2) : 20
ವಾಣಿಜ್ಯ ತೆರಿಗೆ ಇಲಾಖೆ : 41
ಖಜಾನೆ ಇಲಾಖೆ : 2
ಆರ್‌ಡಿಪಿಆರ್ ಇಲಾಖೆ : 20
ಒಳಾಡಳಿತ ಇಲಾಖೆ : 5
ಸಮಾಜ ಕಲ್ಯಾಣ ಇಲಾಖೆ : 10
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ : 7
ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ (ಗ್ರೂಪ್ ಬಿ ) ಖಾಲಿ ಹುದ್ದೆಗಳು
ಕಂದಾಯ ಇಲಾಖೆ : 26
ವಾಣಿಜ್ಯ ತೆರಿಗೆ ಇಲಾಖೆ: 59
ಕಾರ್ಮಿಕ ಇಲಾಖೆ : 4
ಒಳಾಡಳಿತ (ಕಾರಾಗೃಹ) : 3
ಸಹಕಾರ : 21
ಆರ್ಥಿಕ ಇಲಾಖೆ (ಅಬಕಾರಿ) : 5
ಕೌಶಲಾಭಿವೃದ್ಧಿ ಇಲಾಖೆ : 2
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ : 4
ನಗರಾಭಿವೃದ್ಧಿ ಇಲಾಖೆ : 1
ಆರ್ಥಿಕ ಇಲಾಖೆ (ಖಜಾನೆ): 23
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ : 9
ಪ್ರವಾಸೋದ್ಯಮ ಇಲಾಖೆ : 2
ಡಿಪಿಎಆರ್ (ಸಿಬ್ಬಂದಿ): 5
ಸಮಾಜ ಕಲ್ಯಾಣ ಇಲಾಖೆ : 7
Leave a Reply