ಸಂಸದ ರಾಘವೇಂದ್ರ ವಿರುದ್ಧ ಸಚಿವ ಮಧುಬಂಗಾರಪ್ಪ ಕಿಡಿ ! ಶುಗರ್ ಫ್ಯಾಕ್ಟರಿ ವಿಚಾರದಲ್ಲಿ ಏನಿದು ರಾಜಕೀಯ ಕೆಸರೇರಚಾಟ ? 

ಸಂಸದ ರಾಘವೇಂದ್ರ ವಿರುದ್ಧ ಸಚಿವ ಮಧುಬಂಗಾರಪ್ಪ ಕಿಡಿ ! ಶುಗರ್ ಫ್ಯಾಕ್ಟರಿ ವಿಚಾರದಲ್ಲಿ ಏನಿದು ರಾಜಕೀಯ ಕೆಸರೇರಚಾಟ ? 

ಶಿವಮೊಗ್ಗ : ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ತುಂಗಾಭದ್ರಾ ಸಕ್ಕರೆ ಕಾರ್ಖಾನೆ ವಿಚಾರದ ಬಗ್ಗೆ ಮಾತಾಡಿದ್ದಾರೆ.

ತುಂಗಾಭದ್ರಾ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಸಂತ್ರಸ್ತರು ನನಗು ಸಹ ಮನವಿ ಕೊಟ್ಟಿದ್ದಾರೆ. ಸಂಸದ ಬಿ ವೈ ರಾಘವೇಂದ್ರ ಜನಗಳನ್ನು ಎತ್ತಿಕಟ್ಟುವ ಕೆಲಸ ಮಾಡಬಾರದು. ಈ ವಿಚಾರದಲ್ಲಿ ಸಂಸದರು ಹಗುರವಾಗಿ ಮಾತನಾಡಬಾರದು.ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ನೋಡಿಕೊಂಡ್ರು ಅನ್ನುವ ಹಾಗೆ ಸಂಸದರು‌ ಇಷ್ಟು ವರ್ಷ ಸುಮ್ಮನಿದ್ದು ಈಗ ಮಾತನಾಡ್ತಿದ್ದಾರೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ತುಂಗಾಭದ್ರಾ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿ ಇದ್ದರು. ಆಗ ಏನು ಕ್ರಮ ಕೈಗೊಳ್ಳದ ಬಿಜೆಪಿಯ ಯಡಿಯೂರಪ್ಪನವರ ಕುಟುಂಬ ಈಗ ಚುನಾವಣೆ ಸಂದರ್ಭದಲ್ಲಿ ನನ್ನ ವಿರುದ್ದ ಮಾತನಾಡಿದ್ದಾರೆ. ಸಂಸತ್ ನಲ್ಲಿ ಸಂತ್ರಸ್ತ ರೈತರ ಬಗ್ಗೆ ಸಂಸದರು ಮಾತನಾಡಲಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು ಇದು ಅವರಿಗೆ ಶೋಭೆ ತರೊಲ್ಲ ಎಂದು ಗರಂ ಆಗಿದ್ದಾರೆ.

ಸಂಸದ ರಾಘವೇಂದ್ರ ಅವರು ಮಾತನಾಡಬೇಕಾದರೆ ಹುಷಾರಾಗಿ ‌ಮಾತನಾಡಬೇಕು. ಅವರದ್ದು ಬೇಕಾದಷ್ಟು ಇದೆ ಎಲ್ಲವನ್ನು ಹೊರಗೆ ತೆಗೆಯಬೇಕಾಗುತ್ತದೆ ಎಂದಿದ್ದಾರೆ

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.