ಜನವರಿ 01 ಕ್ಕೆ ಸೊರಬ ಬೆಣ್ಣಿಗೇರೆ ಗ್ರಾಮದಲ್ಲಿ ಹೋರಿ ಓಡಿಸುವ ಸ್ಪರ್ಧೆ
ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಬೆಣ್ಣಿಗೇರೆ ಗ್ರಾಮದಲ್ಲಿ 2024ರ ಜನವರಿ 1 ರಂದು ಬೆಳಗ್ಗೆ 8 ರಿಂದ ಸಂಜೆ 4ರವರೆಗೆ “ಹೋರಿ ಓಡಿಸುವ ಸ್ಪರ್ಧೆ” ಹಮ್ಮಿಕೊಳ್ಳಲಾಗಿದೆ.
ಶ್ರೀ ಮೂಕೇಶ್ವರ ಸ್ವಾಮಿಗಳು ಸುಕ್ಷೇತ್ರ ಗುಡ್ಡದಮಲ್ಲಾಪುರ ಮತ್ತು ಶ್ರೀ ಶಿವಾಲಿ ಸ್ವಾಮಿಗಳು ಸುಕ್ಷೇತ್ರ ಸಾತೇನಹಳ್ಳಿ ಆಶೀರ್ವಾದದೊಂದಿಗೆ 25 ವರ್ಷಗಳ ನಂತರ “ಮಿಡಿನಾಗ ಮತ್ತು ಅಶ್ವಮೇಧ” ಹೋರಿ ತವರೂರಿನಲ್ಲಿ ಹೋರಿ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಬಂಗಾರ, ಬೈಕ್ ಸೇರಿದಂತೆ ವೈವಿಧ್ಯ ಬಹುಮಾನಗಳನ್ನು ನೀಡಲಿದ್ದು, ವಿಶೇಷ ಬಹುಮಾನ 1 ಪೀಪಿ ಹೋರಿಗೆ 10 ಗ್ರಾಂ ಬಂಗಾರ, ಬಂಪರ್ ಬಹುಮಾನ 1 ಪೀಪಿ, 1 ಸಣ್ಣ ಹೋರಿಗೆ ಬೈಕ್, ಮೊದಲ ಬಹುಮಾನ 20 ಗ್ರಾಂ ಬಂಗಾರ, ಎರಡನೇ ಬಹುಮಾನ 6 ಗ್ರಾಂ ಬಂಗಾರ, ಮೂರನೇ ಬಹುಮಾನ 6 ಫ್ರೀಡ್ಜ್, ನಾಲ್ಕನೇ ಬಹುಮಾನ ಎಲ್‌ಇಡಿ ಟಿವಿ, ಹೀಗೆ ವಿಶೇಷ ಬಹುಮಾನಗಳಿವೆ.
ಉತ್ತಮ ಹೋರಿ ಹಿಡಿತಗಾರರಿಗೆ ಪ್ರಥಮ ಬಹುಮಾನ 7500 ರೂ. ಟ್ರೋಫಿ, ಎರಡನೇ ಬಹುಮಾನ 5 ಸಾವಿರ ರೂ. ಟ್ರೋಪಿ, ಮೂರನೇ ಬಹುಮಾನ 2500 ರೂ. ಟ್ರೋಫಿ ನೀಡಲಾಗುತ್ತದೆ. ಪ್ರವೇಶ ನಿಯಮ ಹಾಗೂ ಮಾಹಿತಿಗೆ 9972434959, 7022029862, 9880124793 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Reply