ಕೋಡಿಹಳ್ಳಿ ಗ್ರಾಮದಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ನಾಮ ಫಲಕ ಉದ್ಘಾಟನೆ
ಚಿತ್ರದುರ್ಗ : ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಡಾ|| ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ನಾಮ ಫಲಕವನ್ನು ದಲಿತ ಸಮುದಾಯ ಶ್ರೀಯುತ ಸಣ್ಣ ನಾಗಯ್ಯ ರವರು ಸಮುದಾಯದ ಎಲ್ಲ ಮುಖಂಡರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು
ಇದೇ ಸಂದರ್ಭದಲ್ಲಿ ಡಾ|| ಬಿ.ಆರ್ ಅಂಬೇಡ್ಕರ್ ಸರ್ಕಲ್ ನ್ನು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಆದ ಶ್ರೀಯುತ ಮಲ್ಲಯ್ಯ ಹಾಗೂ ಶ್ರೀಯುತ ತಿಪ್ಪೇಸ್ವಾಮಿ ರವರು ಉದ್ಘಾಟಿಸಿದರು, ಸಂಘದ ಅಧ್ಯಕ್ಷರು ಆದ ಶ್ರೀಯುತ ಶಿವಮೂರ್ತಿ.ಟಿ ಮಾತನಾಡಿ ಅಂಬೇಡ್ಕರ್ ರವರ ಹೋರಾಟಗಳು ಸಂವಿಧಾನ ಹಾಗೂ ಭೀಮ ಕೊರೆಂಗಾವ್ ವಿಜಯೋತ್ಸವದ ದಲಿತರ ಸಾಹಸಮಯ ಯುದ್ಧವನ್ನು ಸ್ಮರಿಸಲಾಯಿತು. ನಂತರ ಕೇಕ್ ಕತ್ತರಿಸಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಲಾಯಿತು,
ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರು,ಹಿರಿಯರು,ಮಹಿಳೆಯರು,ಯುವಕರು, ಸಂಘದ ಸರ್ವ ಸದಸ್ಯರು ಹಾಗೂ ಸಂಘದ ಕಾರ್ಯದರ್ಶಿಗಳು ಆದ ಶ್ರೀಯುತ ಶ್ರೀಧರ್.ಏಚ್ , ಖಜಾಂಚಿಯಾದ ಶ್ರೀಯುತ ರಾಜು.ಡಿ , ವಿಜಯ್ ಕುಮಾರ್.ಡಿ, ತಿಪ್ಪೇಸ್ವಾಮಿ.ಯು , ಲಿಂಗರಾಜು, ಮಲ್ಲಿಕಾರ್ಜುನಯ್ಯ.ಟಿ,ಮಂಜುನಾಥ್,ಪುಟ್ಟಣ್ಣ ತಿಪ್ಪೇಸ್ವಾಮಿ.ಎಂ.ಏಚ್, ರುದ್ರಮುನಿ,ರಮೇಶ್,ಮೈಲಾರಿ,ಮನೋಜ್,ಗೋಪಿ,ಕಿರಣ್ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.
Leave a Reply