ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಡಿಯೋ ಗಾಡಿ ಮಾಲೀಕನಿಗೆ  ಬಿತ್ತು ಬರೋಬ್ಬರಿ 17, 000 ದಂಡ ! ಬಿಲ್ ನೋಡಿ ಶಾಕ್ ಆದ ವಾಹನ ಸವಾರ !

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಡಿಯೋ ಗಾಡಿ ಮಾಲೀಕನಿಗೆ ಬಿತ್ತು ಬರೋಬ್ಬರಿ 17, 000 ದಂಡ ! ಬಿಲ್ ನೋಡಿ ಶಾಕ್ ಆದ ವಾಹನ ಸವಾರ !

ಶಿವಮೊಗ್ಗ : ನಗರದ ಶಿವಪ್ಪ ನಾಯಕ ಪ್ರತಿಮೆಯ ಬಳಿ ಸಂಚಾರಿ ಠಾಣೆ ಪೋಲಿಸರಿಂದ ವಾಹನ ತಪಾಸಣೆ ವೇಳೆ ಹಲವು ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಡಿಯೋ ಗಾಡಿಗೆ ಶಿವಮೊಗ್ಗ ಸಂಚಾರಿ ಪೊಲೀಸರು ಬರೋಬ್ಬರಿ 17,000 ದಂಡ ವಿಧಿಸಿದ್ದಾರೆ.

ನಗರದ ಶಿವಪ್ಪ ನಾಯಕ ಪ್ರತಿಮೆಯ ಬಳಿ ಸಂಚಾರಿ ಠಾಣೆ ಪೋಲಿಸರಿಂದ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಹೋಗುತ್ತಿದ್ದ ವಾಹನ ಸವಾರನನ್ನ ತಡೆದು ಶಿವಮೊಗ್ಗ ಸಂಚಾರಿ ಪೊಲೀಸರು ಪರಿಶೀಲಿಸಿದ್ದಾರೆ. ಆಗ ಹಲವು ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಪ್ರಕರಣಗಳು ವಾಹನ ಸವಾರನ ಮೇಲೆ ಇತ್ತು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

 ಸಂಚಾರ ನಿಯಮ ಉಲ್ಲಂಘಿಸಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಾಹನದ ನಂಬರ್ ಪರಿಶೀಲಿಸಿದಾಗ ಹಲವು ಬಾರಿ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದು ಕಂಡುಬಂದಿದೆ. ಈ ವೇಳೆ ಡಿಯೋ ಗಾಡಿ ಮಾಲಿಕನಿಗೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಬರೋಬ್ಬರಿ 17,000 ದಂಡದ ರಶೀದಿಯನ್ನು ವಾಹನ ಸವಾರನಿಗೆ ಕೊಟ್ಟಿದ್ದಾರೆ, ಉದ್ದದ ರಶೀದಿಯನ್ನು ನೋಡಿ ವಾಹನ ಸವಾರ ಶಾಕ್ ಆಗಿದ್ದಾನೆ.

ಬಳಿಕ ಅಲ್ಲಿಯೇ ದಂಡ ಕಟ್ಟಿಸಿಕೊಂಡು ವಾಹನ ಸವಾರನನ್ನು ಬಿಟ್ಟು ಕಳುಹಿಸಿದ್ದಾರೆ 

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.