BREAKING NEWS : ಸಾಗರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ ಅಪಘಾತ ! ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ನುಗ್ಗಿದ ಖಾಸಗಿ ಬಸ್ !
ಶಿವಮೊಗ್ಗ : ಸಾಗರದ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ ಅಪಘಾತವಾಗಿದೆ. ಎದುರಿನಿಂದ ಬರುತ್ತಾ ಇದ್ದ ಗೂಡ್ಸ್ ವಾಹನಕ್ಕೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ, ಪ್ರಯಾಣಿಕರಿದ್ದ ಖಾಸಗಿ ಬಸ್ ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ನುಗ್ಗಿದೆ. ಸಾಗರ ರಸ್ತೆಯ ಗಿಳಾಲ ಗುಂಡಿ ಬಳಿ ಈ ಘಟನೆ ನಡೆದಿದೆ.
ಸಾಗರದ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೊರಡುವವರು, ಆನಂದಪುರದಲ್ಲಿ ನಾಟಿ ಔಷಧಿ ತೆಗೆದುಕೊಳ್ಳುವವರು ಇದ್ದರು ಎಂಬ ಮಾಹಿತಿ ಶಿವಮೊಗ್ಗ ಎಕ್ಸ್ ಪ್ರೆಸ್ ನ್ಯೂಸ್ ಚಾನೆಲ್ ಗೆ ತಿಳಿದುಬಂದಿದೆ.
ಇನ್ನು ಬಸ್ಸಿನಲ್ಲಿ ಇದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಬಸ್ ಚಾಲಕನಿಗೆ ಗಂಭೀರ ಗಾಯವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಲ್ಲಿದ್ದ ಕೆಲ ಸ್ಥಳೀಯರು, ಮಾರ್ಗದಲ್ಲಿ ತೆರಳುತ್ತಿದ್ದವರು ನೆರವಿಗೆ ಧಾವಿಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply