ಶಿವಮೊಗ್ಗ ಎಸ್ ಪಿ ಕಚೇರಿಯ ಮುಂದೆ ಬಿಜೆಪಿ ಪ್ರತಿಭಟನೆ ! ಈಶ್ವರಪ್ಪನವರನ್ನು ಬಂಧಿಸಿದ ಪೊಲೀಸರು !
ಶಿವಮೊಗ್ಗ : ಹುಬ್ಬಳ್ಳಿಯಲ್ಲಿ ಕರಸೇವಕರ ಮೇಲೆ 31 ವರ್ಷದ ಕೇಸ್ ಗಳನ್ನ ರೀ ಓಪನ್ ಮಾಡಿ ಬಂಧನ ಮಾಡಿರುವುದನ್ನ ಖಂಡಿಸಿ, ಇಂದು ಜಿಲ್ಲಾ ಬಿಜೆಪಿ ಘಟಕದಿಂದ ಎಸ್ ಪಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗಿದೆ.
ನಾನು ಕರೆಸೇವಕ ನನ್ನನ್ನು ಬಂಧಿಸಿ ಎಂಬ ಪ್ಲೇಕಾರ್ಡ್ ಹಿಡಿದು ನೂರಾರು ಕಾರ್ಯಕರ್ತರು ಶಿವಮೊಗ್ಗ ಎಸ್ ಪಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಸಚಿವ ಈಶ್ವರಪ್ಪನಾನೂ ಕರಸೇವಕ ಎಂಬ ಪ್ಲಕಾರ್ಡ್ ಹಿಡಿದು ಬಂದು.ನನ್ನನ್ನ ಬಂಧಿಸಿದರೆ ಸರಿ ಇಲ್ಲವಾದರೆ ಎಸ್‌ಪಿ ಕಚೇರಿಯ ಒಳಗೆ ನುಗ್ಗುವುದಾಗಿ ಗುಟುರಿದ್ದಾರೆ.
ನಂತರ ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರನ್ನು ಪೊಲೀಸರು ಬಂದಿಸಿದ್ದಾರೆ.ಈಶ್ವರಪ್ಪನವರನ್ನ ಬಂಧನ ವಿರೋಧಿಸಿ ಭಜನೆ ಮಾಡಿದ ಮಾಜಿ ಶಾಸಕ ಭಾನುಪ್ರಕಾಶ್ ಚಂದ್ರಶೇಖರ್, ಹರಿಕೃಷ್ಣರನ್ನ ಡಿವೈಎಸ್ಪಿ ಸುರೇಶ್ ಮನವೊಲಿಸಿ ವ್ಯಾನ್ ನಲ್ಲಿ ಕೂರಿಸಲಾಯಿತು.
ಶಾಸಕ ಚೆನ್ನಬಸಪ್ಪ ಮಾತನಾಡಿ, ಲಾಠಿ ಗೋಲಿ ಕಾಯೆಂಗೆ ಮಂದಿರ್ ವಹಿ ಬನಾಯೆಂಗೆ ಎಂಬ ಘೋಷಣೆ ನಾಡಿ ರಾಂಂದಿರ ಕಟ್ಟಿದ ಹಿಂದೂ ಸಾಮ್ರಾಜ್ಯ ನನ್ನದು. ರಾಮಭಕ್ತ ಕಟಾರಿಯ ಮೇಲೆ ಗುಂಡು ಹಾರಿಸಲಾಯಿತು. ಅದರ ಪರಿಣಾಮ ಡಿ. ೬ ರಂದು ಏನಾಯಿತು ಎಂಬುದು ಇತಿಹಾಸ ಎಂದರು.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply