ಹೊಸ ವರ್ಷದಂದೇ ಎಂಎಸ್ಐಎಲ್ ಬಾರ್ ನ ಡೋರ್ ಹೊಡೆದು ಹಣ ಕಳವು !
ಸಾಗರ : ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಜಂಬಗಾರು ಎಂಬಲ್ಲಿ ಹೊಸ ವರ್ಷದಂದೇ ಎಂಎಸ್ಐಎಲ್ ಬಾರ್ ನ ಡೋರ್ ಹೊಡೆದು ಬರೋಬ್ಬರಿ 2,95,473/- ಹಣ ಕಳವು ಮಾಡಿರುವ ಘಟನೆ ನಡೆದಿದೆ.
ಇಲ್ಲಿನ ಜಂಬಗಾರುವಿನಲ್ಲಿರುವ ಸರ್ಕಾರಿ ಮಧ್ಯ ಮಾರಾಟ ಮಳಿಗೆಯಲ್ಲಿ ಕಳೆದ ಎರಡು ವರ್ಷಗಳಿಂದ ವೆಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆನಂದಪ್ಪ ಮತ್ತು ಅಶೋಕ್ ಎಂಬುವವರು ಹೊಸ ವರ್ಷದ ಹಿಂದಿನ ದಿನ ಅಂದರೆ ಡಿಸೆಂಬರ್ 31 ರಂದು ಮದ್ಯ ಮಾರಾಟ ಮುಗಿಸಿ ದಿನವಿಡಿ ವ್ಯಾಪಾರ ಮಾಡಿದ್ದ ಹಣವನ್ನು ಭಾನುವಾರ ಆಗಿದ್ದರಿಂದ 2 ದಿನದಿಂದ ಸಂಗ್ರಹವಾದ 2,95,473/- ರೂ ನಗದು ಹಣವನ್ನು ಎಣಿಸಿ ಮಳಿಗೆಯ ಒಳಗೆ ಇದ್ದ ಲಾಕರ್ ನಲ್ಲಿ ಇಟ್ಟುರಾತ್ರಿ ಅಂಗಡಿ ಕ್ಲೋಸ್ ಮಾಡಿ ಮನೆಗೆ ತೆರಳಿದ್ದಾರೆ.
ಮಾರನೇ ದಿನ ಜನವರಿ 1 2024ರ ಬೆಳಿಗ್ಗೆ ಅಂಗಡಿಯ ಮಾಲೀಕರು ಬಂದು ಎಂದಿನಂತೆ ಡೋರ್ ಓಪನ್ ಮಾಡಿದ್ದಾರೆ. ಒಳಗೆ ಹೋಗಿ ನೋಡಿದಾಗ ಲಾಕರ್ ಓಪನ್ ಆಗಿತ್ತು. ಇಟ್ಟಿದ್ದ 2,95,473/ ಕಳ್ಳತನವಾಗಿರುವುದು ಗಮನಕ್ಕೆ ಬಂದಿರುತ್ತದೆ.
ಈ ಘಟನೆ ಸಂಬಂಧ ಸಾಗರ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply