ಗಾಡಿಕೊಪ್ಪದ ಬಳಿ ಮನೆಗೆ ತೆರಳುತ್ತಿದ್ದ ಬ್ಯಾಂಕ್ ಮ್ಯಾನೇಜರ್ ಅನ್ನು ಅಡ್ಡಗಟ್ಟಿ, ದರೋಡೆ ಮಾಡಿದ ಖದೀಮರು !
ಶಿವಮೊಗ್ಗ : ನಗರದ ಗಾಡಿ ಕೊಪ್ಪದ ಬಳಿ ಇರುವ ಲಗಾನ್ ಕಲ್ಯಾಣ ಮಂದಿರದ ಹತ್ತಿರ ಮನೆಗೆ ತೆರಳುತ್ತಿದ್ದ ಬ್ಯಾಂಕ್ ಮ್ಯಾನೇಜರ್ ಅನ್ನು ಅಡ್ರೆಸ್ ಕೇಳುವ ನೆಪದಲ್ಲಿ ಅಡ್ಡಗಟ್ಟಿ, ದರೋಡೆ ಮಾಡಲಾಗಿದೆ
ಬೆಂಗಳೂರಿನ ಬಸವನಗುಡಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಮುರುಳೀಧರ್ ಡೋಂಗ್ರೆ ಎಂಬುವರು ತಮ್ಮ ತಾಯಿಯನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು, ಆಸ್ಪತ್ರೆಗೆ ದಾಖಲಾದ ತಾಯಿಯನ್ನು ಡಿಸ್ಚಾರ್ಜ್ ಮಾಡಿಸಿ ಕರೆದುಕೊಂಡು ಹೋಗಲು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದಿದ್ದರು.
ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ
ಬೆಳಗಿನ ಜಾವ 3: 50ಕ್ಕೆ ಮಹೇಂದ್ರ ಶೋರೂಮ್ ಹತ್ತಿರ ಇಳಿದು ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿದ್ದರು, ನಡೆದುಕೊಂಡು ಹೋದಾಗ ಬೈಕ್ ನಲ್ಲಿ ಬಂದ ಅಪರಿಚಿತರು , ಶಿಕಾರಿಪುರಕ್ಕೆ ಹೇಗೆ ಹೋಗಬೇಕೆಂದು ಅಡ್ರೆಸ್ ಕೇಳಿದ್ದಾರೆ.
ಅಡ್ರೆಸ್ ಕೇಳುವ ನೆಪದಲ್ಲಿ ಬಂದ ಅಪರಿಚಿತರು, ಮತ್ತೆ ಎರಡು ಮೂರು ನಿಮಿಷ ಬಿಟ್ಟು ಬಂದು, ಹಿಂಬದಿಂದ ಮ್ಯಾನೇಜರ್ ಅನ್ನು ಹಲ್ಲೆ ಮಾಡಿದ್ದಾರೆ, ಮ್ಯಾನೇಜರ್ ಬಳಿಯ ರೆಡ್ ಮೀ ನೋಟ್ -4 ಮೊಬೈಲ್ ಮತ್ತು ಬ್ಯಾಗ್ ನ್ನ ಕಿತ್ತುಕೊಂಡು ಹೋಗಿದ್ದಾನೆ. ಬ್ಯಾಗ್ ನಲ್ಲಿ 35 ಸಾವಿರ ರೂ. ಹಣವನ್ನ ಇಟ್ಟುಕೊಂಡು ಬಂದಿದ್ದಾಗಿ ಡೋಂಗ್ರೆ ದೂರಿನಲ್ಲಿ ದಾಖಲಿಸಿದ್ದಾರೆ.
ಇನ್ನು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply