ಕೋಡಿಹಳ್ಳಿಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ

ಕೋಡಿಹಳ್ಳಿಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಬೆಳಿಗ್ಗೆ : 10:30 ಕ್ಕೆ ಸರಿಯಾಗಿ ಎಲ್ಲ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು,

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಚಳ್ಳಕೆರೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದ ಶ್ರೀಯುತ ಸುರೇಶ್ ಕುಮಾರ್ ಹಾಗೂ ಸರ್ಕಾರಿ ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷರು ಆದ ಶ್ರೀಯುತ ಮಾರುತೇಶ್ ಊರಿನ ಮುಖಂಡರು ಆದ ಶ್ರೀಯುತ ಎಸ್.ಪಾಲಯ್ಯ, ಬೋರಪ್ಪ ಸರ್ ಹಾಗೂ ಎಲ್ಲ ಹಿರಿಯ ಗುರುಗಳು ಗಣ್ಯರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು,

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ

 ಸಂಘದ ಅಧ್ಯಕ್ಷರು ಆದ ಶ್ರೀಯುತ ಮಾರುತೇಶ್ ಸರ್ ಮಾತನಾಡಿ ಡಾ.ಬಿ.ಆರ್ ಅಂಬೇಡ್ಕರ್ ರವರ ಆಶಯದಂತೆ ಯಾವುದೇ ಒಂದು ಸಮುದಾಯ ಸಮ ಸಮಾಜ ನಿರ್ಮಾಣ ಆಗಬೇಕಾದರೆ ಎಲ್ಲರಿಗೂ ಶಿಕ್ಷಣ ಎಂಬ ಆಯುದ ತುಂಬಾ ಬಹಳ ಮುಖ್ಯ, ಇಂತಹ ಶಿಕ್ಷಣವನ್ನು ಪ್ರತಿಯೊಬ್ಬರ ಮಕ್ಕಳಿಗೆ ನೀಡುವಂತೆ ಪೋಷಕರು ಗಮನಹರಿಸಬೇಕು ಎಂದು ಹೇಳಿದರು, ಪ್ರಾಸ್ತಾವಿಕ ನುಡಿಯನ್ನು ವೈದ್ಯರು ಆದ ಶ್ರೀಯುತ ಮುನಿಸ್ವಾಮಿ ರೆಡ್ಡಿ ರವರು ಮಾತನಾಡಿ ಗುರು ಎಂದರೆ ವ್ಯಕ್ತಿ ಅಲ್ಲ ಅದು ಒಂದು ಶಕ್ತಿ, ಗುರುತರವಾದ ದನ್ನು ರುಜುವಾತು ಪಡಿಸುವವನೆ ಗುರು ಎಂದು ಹೇಳಿದರು ಹಾಗೂ ಶಾಲೆಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ನೀಡುವುದಾಗಿ ಹೇಳಿದರು.

ಎಲ್ಲ ಗುರುಗಳನ್ನು ಮತ್ತು ಗಣ್ಯರನ್ನು ಮೆರವಣಿಗೆಯ ಮೂಲಕ ಗ್ರಾಮದ ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು, ನಂತರ ಎಲ್ಲ ಗುರುಗಳನ್ನು ಸನ್ಮಾನಿಸಲಾಯಿತು,ನಂತರ ಸಂಜೆ ಶಾಲಾ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು ಎಲ್ಲ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ತುಂಬಾ ವಿಜೃಂಭಣೆಯಿಂದ ನಡೆಯಿತು, ಈ ಕಾರ್ಯಕ್ರಮಕ್ಕೆ ಪ್ರೀತಿಯ ಗುರುಗಳು, ಸ್ನೇಹಿತರು,ಕಿರಿಯ ಮತ್ತು ಹಿರಿಯ ವಿದ್ಯಾರ್ಥಿಗಳು ಊರಿನ ಮುಖಂಡರು,ಯುವಕರು, ಎಲ್ಲ ಸಂಘಟನೆಗಳ ಪದಾಧಿಕಾರಿಗಳು, ನೆರೆ ಹೊರೆಯ ಗ್ರಾಮಸ್ಥರು ಎಲ್ಲರೂ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಯಿತು..

ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಸಂಯೋಜಕರು ಆದ ಶ್ರೀಯುತ ಲಿಂಗರಾಜು,ಶ್ರೀಕಾಂತ್,ತಿಪ್ಪೇಸ್ವಾಮಿ.ವಿ.ಟಿ ವಿಜಯ್ ಕುಮಾರ್.ಡಿ, ವಿನಯ್ ಕುಮಾರ್ ಬಿ.ಎಂ, ನಾಗರಾಜ್,ತಿಪ್ಪೇಸ್ವಾಮಿ.ಯು, ತಿಪ್ಪೇಸ್ವಾಮಿ.ಎಂ,ಬಸವರಾಜು,ನಾಗರಾಜು,ಬಸವರೆಡ್ಡಿ,ಪ್ರಸಾದ್,ಶಿವಾರೆಡ್ಡಿ ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಆದ ಶ್ರೀಯುತ ಜಗನ್ನಾಥ ಕೆ.ಏಚ್,ಬಸವರಾಜ್.ಜಿ.ಟಿ, ರತ್ನಮ್ಮ.ಎಲ್,ಸುಶೀಲಮ್ಮ.ಎಸ್, ಆಶಾ.ಆರ್, ಸುಪ್ರಿಯಾ.ಜೆ ಉಪಸ್ಥಿತರಿದ್ದರು ಬಸವರಾಜು ಸರ್ ರವರು ನಿರೂಪಿಸಿದರು ಶಿವಮೂರ್ತಿ.ಟಿ ವಂದಿಸಿದರು..


Leave a Reply

Your email address will not be published.