ಪ್ರಾಧ್ಯಾಪಕರಿಂದ ಲೈಂಗಿಕ ಕಿರುಕುಳ: 500 ವಿದ್ಯಾರ್ಥಿನಿಯರಿಂದ ಪ್ರಧಾನಿಗೆ ಪತ್ರ

ಪ್ರಾಧ್ಯಾಪಕರಿಂದ ಲೈಂಗಿಕ ಕಿರುಕುಳ: 500 ವಿದ್ಯಾರ್ಥಿನಿಯರಿಂದ ಪ್ರಧಾನಿಗೆ ಪತ್ರ

ವಿವಿಯ ಪ್ರಾಧ್ಯಾಪಕರೊಬ್ಬರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸುಮಾರು 500 ಕಾಲೇಜು ವಿದ್ಯಾರ್ಥಿನಿಯರು ಪ್ರಧಾನಿ ನರೇಂದ್ರ ಮೋದಿ ಹಾಗೂ ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್ ಕಟ್ಟರ್ ಸೇರಿದಂತೆ ಹಲವರಿಗೆ ಪತ್ರ ಬರೆದಿರುವ ಘಟನೆ ಹರಿಯಾಣದ ಸಿರ್ಸಾ ನಗರದಲ್ಲಿ ನಡೆದಿದೆ.

ಲೈಂಗಿಕ ದೌರ್ಜನ್ಯ ನೀಡುತ್ತಿರುವ ಸಿರ್ಸಾ ನಗರದ ಚೌಧರಿ ದೇವಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ಅಮಾನತುಗೊಳಿಸಬೇಕು ಹಾಗೂ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ವಿಚಾರಣೆಗೊಳಪಡಿಸಬೇಕು ಎಂದು ಪತ್ರದಲ್ಲಿ ವಿದ್ಯಾರ್ಥಿನಿಯರು ಬೇಡಿಕೆಯಿಟ್ಟಿದ್ದಾರೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಚೌಧರಿ ದೇವಿ ವಿವಿಯ ಉಪಕುಲಪತಿ ಡಾ. ಅಜ್ಮಲ್ ಸಿಂಗ್ ಮಲಿಕ್, ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಗೃಹ ಸಚಿವ ಅನಿಲ್ ವಿಜ್ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಹಿರಿಯ ರಾಜ್ಯ ಸರ್ಕಾದ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೂ ಪತ್ರವನ್ನು ರವಾನಿಸಿದ್ದಾರೆ.

ಆರೋಪಿ ಪ್ರಾಧ್ಯಾಪಕರು ಕೊಳಕು ಹಾಗೂ ಅಶ್ಲೀಲ ಕೃತ್ಯಗಳನ್ನು ವೆಸಗಿದ್ದಾರೆ. ಅಲ್ಲದೆ ಈ ಪ್ರಾಧ್ಯಾಪಕರು ಸ್ನಾನದ ಕೊಠಡಿಗೆ ಕರೆದೋಯ್ದು ತಮ್ಮ ಖಾಸಗಿ ಭಾಗಗಳನ್ನು ಸ್ಪರ್ಶಿಸುವುದಲ್ಲದೆ ನಮ್ಮೊಂದಿಗೆ ಅಶ್ಲೀಲ ಪದ ಪ್ರಯೋಗ ಮಾಡುತ್ತಾರೆ. ನಾವು ಈ ಬಗ್ಗೆ ಪ್ರತಿಭಟಿಸಿದಾಗ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ಅಮಾನುಷ ಕೃತ್ಯವು ಹಲವು ತಿಂಗಳುಗಳಿಂದ ನಡೆಯುತ್ತಿದ್ದು, ಸ್ವತಃ ಉಪಕುಲಪತಿಗಳು ಲೈಂಗಿಕ ಕಿರುಕುಳ ನೀಡುವ ಪ್ರಾಧ್ಯಾಪಕರನ್ನು ರಕ್ಷಿಸುತ್ತಿದ್ದಾರೆ. ಪ್ರಾಧ್ಯಾಪಕರಿಗೆ ರಾಜಕೀಯ ಪ್ರಭಾವವಿರುವ ಕಾರಣ ನಮ್ಮನ್ನು ಕಾಲೇಜಿನಿಂದ ಉಚ್ಚಾಟಿಸುವುದಾಗಿ ಬೆದರಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಇದಲ್ಲದೆ ಉಪಕುಲಪತಿಗಳು ವಿದ್ಯಾರ್ಥಿನಿಯರಿಗೆ ಉತ್ತಮ ಹಾಗೂ ಪ್ರಾಯೋಗಿಕ ಅಂಕಗಳನ್ನು ನೀಡುವ ಮೂಲಕ ಆರೋಪಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

“ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಶ್ವವಿದ್ಯಾನಿಲಯವು ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ತನ್ನದೇ ಆದ ಸಮಿತಿಯನ್ನು ಹೊಂದಿದೆ. ಇದು ಗಂಭೀರ ಆರೋಪವಾಗಿದೆ. ಪತ್ರದಲ್ಲಿ ಯಾವುದೇ ಹೆಸರಿಲ್ಲ ಆದರೆ ನಾವು ಇದನ್ನು ತನಿಖೆ ಮಾಡುತ್ತೇವೆ. ನಂತರವಷ್ಟೇ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಬಿಡಲಾಗುವುದಿಲ್ಲ. ಸಿಸಿ ಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ನೀಡಲಾಗಿದೆ. ಪತ್ರದ ಸಾರಾಂಶದ ಪ್ರಕಾರ ಸಿಸಿ ಟಿವಿ ದೃಶ್ಯಗಳನ್ನು ಅಳಿಸಲಾಗಿದೆ ಎನ್ನಲಾಗಿದೆ” ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ ರಾಜೇಶ್ ಕುಮಾರ್ ಬನ್ಸಾಲ್ ತಿಳಿಸಿದ್ದಾರೆ

 


Leave a Reply

Your email address will not be published.