ವೀಲಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟ ಯುವಕ ! ಬೈಕ್ ಪತ್ತೆ ಮಾಡಿ ಪ್ರಕರಣ ದಾಖಲಿಸಿದ ಪಿಎಸ್ಐ !
ಶಿವಮೊಗ್ಗ : ನಗರದ ಗಜಾನನ ಗೇಟ್ ಮತ್ತು ತೀರ್ಥಹಳ್ಳಿ ರಸ್ತೆಯಲ್ಲಿ ಜೀವದ ಮೇಲೆ ಪರಿಜ್ಞಾನವಿಲ್ಲದೆ, ಅಮಾಯಕರ ಜೀವಕ್ಕೆ ಕುತ್ತು ತರುವಂತೆ, ಅಪಾಯಕಾರಿಯಾದ ವೀಲಿಂಗ್ ಮಾಡುತ್ತಿದ್ದ ಯುವಕನ ಮೇಲೆ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ನಗರದ ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಗಜಾನನ ಗೇಟ್ ಮತ್ತು ತೀರ್ಥಹಳ್ಳಿ ರಸ್ತೆಯಲ್ಲಿ KA14ET9*** ದ್ವಿ ಚಕ್ರ ವಾಹನ ವನ್ನು ವ್ಹೀಲಿಂಗ್ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಹೀಲಿಂಗ್ ಮಾಡುವ ವಿಡಿಯೋವನ್ನು ಹರಿಬಿಟ್ಟ ಹಿನ್ನೆಲೆಯಲ್ಲಿ ಸದರಿ ಯುವಕನ್ನು ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಹೆಚ್.ಸಿ ಸಂದೀಪ್ ರವರು ಯುವಕನ ಬೈಕ್ ಪತ್ತೆ ಮಾಡಿದ್ದರು.
ಸದರಿ ಯುವಕ ಶಿವಮೊಗ್ಗನಗರದ ಕಾಮಾಕ್ಷಿ ಬೀದಿಯ ವಾಸಿಯಾದ ಯಶವಂತ ಬಿನ್ ಶಿವಕುಮಾರ್ ರವರಿಗೆ ಪಿಎಸ್ಐ ತಿರುಮಲೇಶ್ ರವರು ಐಎಂವಿ ಕಾಯ್ದೆ ಅಡಿಯಲ್ಲಿ 1.Racing and trails of Speed .2. WITHOUT D.L TWO WHEELERS 3.RECKLESS/DANGEROUS DRIVING – TWO WHEELERS 4.WITHOUT SIDE MIRROR ಈ ಮೇಲ್ಕಂಡ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲು ಮಾನ್ಯ 4ನೇ ACJ & JMFC ನ್ಯಾಯಾಲಯಕ್ಕೆ ದಿನಾಂಕ 04-01-2024 ರಂದು ದೋಷಾರೋಪ ಪತ್ರವನ್ನು ಸಲ್ಲಿಸಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply