BIG NEWS : ಶಿವಮೊಗ್ಗದಲ್ಲಿ 20ಕ್ಕೂ ಹೆಚ್ಚು ಕ್ಲಿನಿಕ್ ಗಳ ಮೇಲೆ ದಾಳಿ !

BIG NEWS : ಶಿವಮೊಗ್ಗದಲ್ಲಿ 20ಕ್ಕೂ ಹೆಚ್ಚು ಕ್ಲಿನಿಕ್ ಗಳ ಮೇಲೆ ದಾಳಿ !

ಶಿವಮೊಗ್ಗ : ನಗರದಲ್ಲಿ ನಕಲಿ ವೈದ್ಯರುಗಳ ಹಾವಳಿ ಮತ್ತು ಪರವಾನಿಗೆ ಇಲ್ಲದೆ ಕ್ಲಿನಿಕ್ ಗಳನ್ನು ನಡೆಸುತ್ತಿರುವುದಾಗಿ ದೂರು ಬಂದ ಹಿನ್ನೆಲೆ. ಟಿ ಹೆಚ್ ಒ ಚಂದ್ರಶೇಖರ್ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ 20ಕ್ಕೂ ಹೆಚ್ಚು ಕ್ಲಿನಿಕ್ ಗಳ ಮೇಲೆ ದಾಳಿ ನಡೆದಿದೆ.

ದಾಳಿಯ ವೇಳೆ 12 ಕ್ಲೀನಿಕ್ ಗಳ ವೈದ್ಯರು ಬಾಗಿಲು ತೆರೆಯದೆ ಇರುವುದು, ಒಂದು ಕ್ಲಿನಿಕ್ ಬಂದ್ ಮಾಡಲು ಸೂಚಿಸಿರುವುದು ಬೆಳಕಿಗೆ ಬಂದಿದೆ.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಮಿಳಘಟ್ಟ, ಅಣ್ಣಾನಗರ, ತುಂಗನಗರ 25 ಕ್ಲೀನಿಕ್ ಗಳ ಮೇಲೆ ಟಿಹೆಚ್ಒ ಚಂದ್ರಶೇಖರ್ ಅವರ ತಂಡ ಜ.4 ರಂದು ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಕೆಪಿಎಂಇ ಆಕ್ಟ್ ನ ಅಡಿಯಲ್ಲಿ ಕ್ಲೀನಿಕ್ ನ್ನ ನೋಂದಣಿ ಮಾಡಿಸಬೇಕು.‌ ಯಾವ ಸಿಸ್ಟಮ್ ನಲ್ಲಿ ಪ್ರಾಕ್ಟೀಸ್ ಮಾಡಿರುತ್ತಾರೋ ಆ ವಿಷಯದಲ್ಲೇ ವೈದ್ಯಗಿರಿಯನ್ನ ನಡೆಸಬೇಕು.

ಜಾಹಿರಾತು :

ಆಯುಷ್ ವೈದ್ಯರು ಮತ್ತು ಹಲೋಪತಿ ವೈದ್ಯರೂ ಸಹ ಪರವಾನಗಿ ಪಡೆಯಬೇಕೆಂಬ ಅಂಶಗಳ ಮೇಲೆ ದಾಳಿ ನಡೆದಿದೆ. ಈ ದಾಳಿಯ ವೇಳೆ 10 ಕ್ಕೂ ಹೆಚ್ಚು ಕ್ಲಿನಿಕ್ ಗಳು ಪರವಾನಗಿ ಇಲ್ಲದೆ ನಡೆಸಿರುವುದು, 12 ಕ್ಲಿನಿಕ್ ಗಳು ಬಾಗಿಲೇ ತೆಗೆದಿರುವುದು ಕಂಡು ಬಂದಿದೆ.

ಇನ್ನೂ ಬಾಗಿಲು ತೆಗೆಯದ ಕ್ಲಿನಿಕ್ ಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ. ದಾಳಿ ವೇಳೆ ಒಂದು ಕ್ಲಿನಿಕ್ ಬಂದ್ ಮಾಡಲು ಸೂಚಿಸಲಾಗಿದೆ ಮತ್ತು ಐದು ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.