ಜೆಸಿಐ ಚಿರಂತನ ಅಧ್ಯಕ್ಷರಾಗಿ ನಾಗರಾಜ್ ಅಂಗಡಿ

ಜೆಸಿಐ ಚಿರಂತನ ಅಧ್ಯಕ್ಷರಾಗಿ ನಾಗರಾಜ್ ಅಂಗಡಿ

ಶಿವಮೊಗ್ಗ: ಜೆಸಿಐ ಶಿವಮೊಗ್ಗ ಚಿರಂತನ ಸಂಸ್ಥೆಯ 3ನೇ ಪದಗ್ರಹಣ ಸಮಾರಂಭದಲ್ಲಿ 2024ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ. ನಾಗರಾಜ್ ಎಸ್.ಅಂಗಡಿ ಹಾಗೂ ಕಾರ್ಯದರ್ಶಿಯಾಗಿ ರುದ್ರೇಶ ಕೋರಿ ಅಧಿಕಾರ ಸ್ವೀಕರಿಸಿದರು.

ನಗರದ ಶುಭಂ ಹೊಟೇಲ್‌ನಲ್ಲಿ ಆಯೋಜಿಸಿದ್ದ ಜೆಸಿಐ ಶಿವಮೊಗ್ಗ ಚಿರಂತನ ಸಂಸ್ಥೆಯ 3ನೇ ಪದಗ್ರಹಣ ಸ್ವೀಕಾರ ಸಮಾರಂಭ ಅತ್ಯಂತ ಯಶಸ್ವಿಯಾಗಿ ಜರುಗಿತು. ಟಿಎಂಎಇಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಗುಂಡಯ್ಯ ಹಿರೇಮಠ್ ಅತಿಥಿಯಾಗಿ ಪಾಲ್ಗೊಂಡಿದ್ದರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ರಾಷ್ಟ್ರೀಯ ಮಾಜಿ ಉಪಾಧ್ಯಕ್ಷ, ಜೆಸಿಐ ಸೆನೆಟರ್ ಡಾ. ಎಸ್.ವಿ.ಶಾಸ್ತ್ರಿ ಉದ್ಘಾಟಿಸಿದರು. ಸಹಕಾರಿ ದುರೀಣ ನಾಗರಾಜ್ ಹರತಾಳು, ನಿಕಟಪೂರ್ವ ವಲಯ ಅಧ್ಯಕ್ಷ ಅನುಷ್ ಗೌಡ ಅವರು ನೂತನ ಅಧ್ಯಕ್ಷರಿಗೆ ಶುಭಕೋರಿದರು. ವಲಯ ಅಧ್ಯಕ್ಷ ಚನ್ನವಿರೇಶ್ ಹಾವಣಗಿ ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿದರು.

ಜಾಹಿರಾತು :

ವಲಯ ಉಪಾಧ್ಯಕ್ಷ ಸಂತೋಷ್ ಸೋಗಿ ಅವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಜೆಸಿಐ ಶಿವಮೊಗ್ಗ ಚಿರಂತನ 2023 ಅಧ್ಯಕ್ಷೆ ಡಾ. ಎಸ್.ಬಿ.ಭಾಗ್ಯಲಕ್ಷ್ಮೀ ಆಚಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಥಾಪಕ ಅಧ್ಯಕ್ಷೆ ಶಾಂತಾ ಶೆಟ್ಟಿ ಉಪಸ್ಥಿತರಿದ್ದರು.

ಜೆಸಿಐ ಶಿವಮೊಗ್ಗ ಚಿರಂತನ ಸಂಸ್ಥೆಯ ಅಧ್ಯಕ್ಷರಾಗಿ ಡಾ. ನಾಗರಾಜ ಎಸ್.ಅಂಗಡಿ, ಕಾರ್ಯದರ್ಶಿಯಾಗಿ ರುದ್ರೇಶ್ ಕೋರಿ, ಸಹ ಕಾರ್ಯದರ್ಶಿಯಾಗಿ ನಿಶಾಂತ್, ತ್ರಿವೇಣಿ, ಉಪಾಧ್ಯಕ್ಷರಾಗಿ ಡಾ. ಯತೀಶ್, ಡಾ. ವಾಸುದೇವ್, ಚಂದನ್ ಎನ್ ಹೊಳ್ಳ, ಡಾ. ಎ ಬಿ ಕೃಷ್ಣಮೂರ್ತಿ ಆಚಾರ್, ಯತಿರಾಜ್, ಖಜಾಂಚಿಯಾಗಿ ಪೃಥ್ವಿ, ನಾಗರಾಜ್, ನಿರ್ದೇಶಕರಾಗಿ ಮಮತಾ, ಉಮಾಪತಿ, ಡಾ. ಪದ್ಮಿನಿ, ಚಂದನ ಚಾರ್, ನಾಗರಾಜ್ ಪೂಜಾರ್, ಮಂಜುನಾಥ್, ಉಮೇಶ್, ಮಹಿಳಾ ಜೆಸಿ ಅಧ್ಯಕ್ಷರಾಗಿ ಜ್ಯೋತಿ ಉಮೇಶ್, ಜೂನಿಯರ್ ಜೆಸಿ ಅಧ್ಯಕ್ಷರಾಗಿ ಅಭಿಜ್ಞಾ ಹಿರೇಮಠ ಅಧಿಕಾರ ಸ್ವೀಕರಿಸಿದರು.


Leave a Reply

Your email address will not be published.