ಮಾಚೇನಹಳ್ಳಿ ಡೈರಿಯ ಬಳಿ ರೈತರ ಪ್ರತಿಭಟನೆ ! ರಸ್ತೆಗೆ ಹಾಲು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ ರೈತರು !
ಶಿವಮೊಗ್ಗ : ಹಾಲಿನ ದರ ಇಳಿಕೆ ಖಂಡಿಸಿಇಂದು ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಹಾಲು ಉತ್ಪಾದಕರ ಸಂಘ ಕಿಸಾನ್ ಸಂಘದ ಅಡಿಯಲ್ಲಿ ಶಿವಮೊಗ್ಗದ ಮಾಚೇನಹಳ್ಳಿಯಲ್ಲಿರುವ ಶಿಮೂಲ್ ಆಡಳಿತ ಕಚೇರಿ ಹಾಗೂ ಡೈರಿಯ ಮುಂಭಾಗದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಹಾಲು ಉತ್ಪಾದಕರ ಸಂಘ ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ದಕ್ಷಿಣ ಪ್ರಾಂತ ಇಂದು ಶಿಮೂಲ್ ಮುಂದೆ ಹಾಲು ಚೆಲ್ಲುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.ಡೈರಿಯ ಮುಂಭಾಗದಲ್ಲಿ ರೈತರು ರಸ್ತೆ ತಡೆ ಮಾಡಲು ಮುಂದಾಗಿದ್ದು ಅವರನ್ನ ಶಾಂತಿಯುತವಾಗಿ ಪ್ರತಿಭಟನಾ ಸ್ಥಳಕ್ಕೆ ಸ್ಥಳಾಂತರಿಸಲಾಯಿತು
ಜಾಹಿರಾತು :
ಕೆಲಕಾಲ ರೈತರಿಂದ ರಸ್ತೆ ತಡೆಯಾದ ಕಾರಣ ಎನ್ ಹೆಚ್ 206 – ಬಿ.ಹೆಚ್. ರಸ್ತೆ ಎಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.ವಾಹನಗಳು ಸಾಲುಗಟ್ಟಿ ನಿಂತಿತ್ತು.ಶಿಮೂಲ್ ಕಛೇರಿಯ ಎದುರು ಪೊಲೀಸ್ ಬಿಗಿ ಭದ್ರತೆ ಮಾಡಲಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply