ಕೋಡಿಹಳ್ಳಿಯಲ್ಲಿ ಅದ್ದೂರಿ ಶ್ರೀ ಶರಣ ಬಸವೇಶ್ವರ ಹಾಗೂ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿಯ ಕಾರ್ತಿಕೋತ್ಸವ 

ಕೋಡಿಹಳ್ಳಿಯಲ್ಲಿ ಅದ್ದೂರಿ ಶ್ರೀ ಶರಣ ಬಸವೇಶ್ವರ ಹಾಗೂ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿಯ ಕಾರ್ತಿಕೋತ್ಸವ 

ಚಿತ್ರದುರ್ಗ : ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ದಿನಾಂಕ : 09/01/2024 ಮಂಗಳವಾರ ರಂದು ಶ್ರಿ ಶರಣ ಬಸವೇಶ್ವರ ಹಾಗೂ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿಯ ಕಾರ್ತಿಕೋತ್ಸವದ ರಥೋತ್ಸವ ಅದ್ದೂರಿಯಾಗಿ ನಡೆಯಿತು.

ರಥೋತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಕುಣಿತ, ವೀರಗಾಸೆ ನೃತ್ಯ,ತಮಟೆ ನಗಾರಿಗಳಿಂದ ಮೆರವಣಿಗೆ ಮೂಲಕ ಸಾಗಿ ಪಾದಗಟ್ಟೆ ತಲುಪಿತು,ನೂರಾರು ಭಕ್ತರು ದೊಡ್ಡ ದೊಡ್ಡ ಹೂವಿನ ಹಾರಗಳನ್ನು ರಥೋತ್ಸವಕ್ಕೆ ಅರ್ಪಿಸಿ ಭಕ್ತಿ ಭಾವ ಮೆರೆದರು, ಸಾವಿರಾರು ಭಕ್ತರು ತೇರಿಗೆ ಹೂವು, ಹಣ್ಣು ,ಕಾಯಿ,ದವನ ಸಮರ್ಪಿಸುವುದರ ಮೂಲಕ ಈ ರಥೋತ್ಸವಕ್ಕೆ ಸಾಕ್ಷಿಯಾದರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಜಾಹಿರಾತು :

ಈ ಸಂದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ಎಲ್ಲ ಪದಾಧಿಕಾರಿಗಳು 

ಹಟ್ಟಿಯ ಯಜಮಾನರು ಮತ್ತು ಮುಖಂಡರು, ಯುವಕ/ಯುವತಿಯರು, ಸರ್ಕಾರಿ ಹಾಗೂ ಖಾಸಗಿ ನೌಕರರು,ಹಿರಿಯ ಕಲಾವಿದರು ಮಹಿಳಾ ಸಂಘಗಳ ಪದಾಧಿಕಾರಿಗಳು, ಸರ್ವ ಸದಸ್ಯರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕೋಡಿಹಳ್ಳಿ ಗ್ರಾಮದ ಸಮಸ್ತ ನಾಗರೀಕ ಬಂಧುಗಳು ಹಾಜರಿದ್ದರು, ರಥೋತ್ಸವವು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅದ್ದೂರಿಯಾಗಿ ಆಚರಿಸಲಾಯಿತು.


Leave a Reply

Your email address will not be published.