ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನೀರು ಪಾಲು
ತೀರ್ಥಹಳ್ಳಿ : ಈಜಲು ಹೋದ ಬಿಹಾರಿ ಮೂಲದ ಯುವಕನೋರ್ವ ನೀರುಪಾಲದ ಘಟನೆ ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಜಾತ್ರೆ ವ್ಯಾಪಾರಕ್ಕಾಗಿ ಅಂಗಡಿ ಮುಂಗಟ್ಟು ಹಾಕಲು ಬಿಹಾರದಿಂದ ಕುಟುಂಬವೊಂದು ಬಂದಿದ್ದು ಅದರಲ್ಲಿ ತಂದೆ-ಮಗ ಸ್ನಾನಕ್ಕೆ ಹೋದಾಗ ಈ ಘಟನೆ ನಡೆದಿದೆ.
ಸ್ಥಳೀಯರಾದ ಮುಳುಗು ತಜ್ಞ ಪ್ರಮೋದ್ ಪೂಜಾರಿ ಮತ್ತು ತಂಡ ಹಾಗೂ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸುತ್ತಿದ್ದಾರೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply