ಮೊರಾರ್ಜಿ ದೇಸಾಯಿ ಶಾಲೆಯ ಪ್ರವೇಶಕ್ಕೆ ಉಚಿತ ತರಬೇತಿ
ಸಾಗರ : ಮುರಾರ್ಜಿ ದೇಸಾಯಿ ವಸತಿ ಶಾಲೆಯ 6 ನೇ ತರಗತಿ ಪ್ರವೇಶಕ್ಕಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಜ.18 ರಂದು ಉಚಿತವಾಗಿ ತರಬೇತಿ ತರಗತಿಯನ್ನು ವ್ಯವಸ್ಥೆ ಮಾಡಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ. ಪ್ರತಿ ಶನಿವಾರ ಬೆಳಗ್ಗೆಯಿಂದ ತರಗತಿಗಳನ್ನು ನಡೆಸಲಾಗುವುದು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈ ಕೆಳಗಿನ ದೂರವಾಣಿಗೆ ಸಂಪರ್ಕಿಸಿ ಹೆಸರುಗಳನ್ನು ನೀಡಿ ಪೂರ್ವ ಸಿದ್ಧತಾ ವಿವರಗಳನ್ನು ಪಡೆಯಬಹುದು ಆರ್ ಎಂ ಭಾಪಟ್ : 9448414940, ಎಚ್ ಕೆ ಪರಮಾತ್ಮ : 9448669766, 9663845940
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply