ಮಲವಗೊಪ್ಪದ ಬಳಿ ಮರದ ಕೆಳಗೆ ದಂಪತಿಯ ಶವ ಪತ್ತೆ !
ಶಿವಮೊಗ್ಗ : ನಗರದ ಮಲವಗೊಪ್ಪದಲ್ಲಿ ಸಕ್ಕರೆ ಕಾರ್ಖಾನೆ ಪ್ರದೇಶದಲ್ಲಿ ಮರವೊಂದರ ಕೆಳಗೆ ಓರ್ವ ಪುರುಷ ಮತ್ತು ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ಲಿಮಿಟ್ಸ್ನಲ್ಲಿ ಗಂಡ ಹೆಂಡತಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ಶುಗರ್ ಪ್ಯಾಕ್ಟರಿ ಬಳಿ ಈ ಇಬ್ಬರ ಮೃತದೇಹ ನಿನ್ನೆ ರಾತ್ರಿ ಪತ್ತೆಯಾಗಿದೆ. ಇಬ್ಬರು ಸಹ ಮೃತಪಟ್ಟು ದಿನವಾಗಿರಬಹುದು ಎಂದು ಪೊಲೀಶ್ ಮೂಲಗಳು ತಿಳಿಸಿವೆ.
ಇಬ್ಬರು ಸಹ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಯಿದ್ದು ಮೃತದೇಹವನ್ನು ಮೆಗ್ಗಾನ್ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಇನ್ನೂ ಮೃತಪಟ್ಟವರು ಯಾರು? ಎಲ್ಲಿಯವರು ಎಂಬ ಗುರುತು ಸಹ ಪೊಲೀಸರಿಗೆ ತಿಳಿದುಬಂದಿಲ್ಲ. ಈ ಸಂಬಂಧ ಇನ್ನಷ್ಟೆ ವಿಚಾರಣೆ ನಡೆಯಬೇಕಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply