ಮೃತದೇಹ ಶೀತಲೀಕರಣ ಫ್ರೀಜರ್‌ ಬಾಕ್ಸ್ ಲೋಕಾರ್ಪಣೆ : ಭಾವಸಾರ ವಿಜನ್‌ ಇಂಡಿಯಾ ಪ್ರೇರಣಾದಿಂದ ಸರ್ಜಿ ಫೌಂಡೇಷನ್‌ಗೆ ಹಸ್ತಾಂತರ

ಮೃತದೇಹ ಶೀತಲೀಕರಣ ಫ್ರೀಜರ್‌ ಬಾಕ್ಸ್ ಲೋಕಾರ್ಪಣೆ : ಭಾವಸಾರ ವಿಜನ್‌ ಇಂಡಿಯಾ ಪ್ರೇರಣಾದಿಂದ ಸರ್ಜಿ ಫೌಂಡೇಷನ್‌ಗೆ ಹಸ್ತಾಂತರ

ಶಿವಮೊಗ್ಗ: ಭಾವಸಾರ ವಿಜನ್‌ ಇಂಡಿಯಾ ಪ್ರೇರಣಾ ಸಂಸ್ಥೆಯು ನಗರದಲ್ಲಿ ಮೊದಲಬಾರಿಗೆ ಸಾರ್ವಜನಿಕರ ಉಪಯೋಗಕ್ಕಾಗಿ ಉಚಿತ ಮೃತದೇಹ ಶೀತಲೀಕರಣ ಫ್ರೀಜರ್‌ ಬಾಕ್ಸ್ ನ್ನು ಸರ್ಜಿ ಫೌಂಡೇಷನ್‌ಗೆ ಗುರುವಾರ ಹಸ್ತಾಂತರಿಸಿತು. 

ಸರ್ಜಿ ಫೌಂಡೇಷನ್‌ ಹಾಗೂ ಸರ್ಜಿ ಆಸ್ಪತ್ರೆಯ ಮೂಲಕ ಇದರ ಸಂಪೂರ್ಣ ನಿರ್ವಹಣೆಯನ್ನು ಮಾಡಲಾಗುತ್ತದೆ.ಯಾವುದೇ ಜಾತಿ-ಧರ್ಮಕ್ಕೆ ಇದು ಸೀಮಿತವಲ್ಲ, ಎಲ್ಲಾ ವರ್ಗದ ಜನರಿಗೆ ಉಚಿತವಾಗಿ ಲಭ್ಯ. ಡೆಡ್‌ ಬಾಡಿ ಪ್ರೀಜರ್‌ನ್ನು ತೆಗೆದುಕೊಂಡು ಹೋಗುವ ಸಾರಿಗೆ ವೆಚ್ಚವನ್ನು ಬಳಕೆದಾರರು ಭರಿಸಬೇಕಾಗುತ್ತದೆ, ಇದಕ್ಕೆ ಅತ್ಯಂತ ಕಡಿಮೆ ದರ ನಿಗದಿ ಮಾಡಲಾಗುತ್ತದೆ. ವಾಹನದ ಜವಾಬ್ದಾರಿ ಮೃತರ ಕುಟುಂಬದವರದ್ದಾಗಿರುತ್ತದೆ. ಅಂತ್ಯಕ್ರಿಯೆ ನಂತರ ಫ್ರೀಜರ್‌ ಬಾಕ್ಸ್ ಮರಳಿಸಿದ ನಂತರ ಸ್ವಚ್ಛತೆ ಮಾಡಿಕೊಂಡು ನಿರ್ವಹಣೆ ಮಾಡಲಾಗುತ್ತದೆ ಮತ್ತು ಅದರ ನಿರ್ವಹಣೆಗಾಗಿ ಒಬ್ಬರನ್ನು ನೇಮಕ ಮಾಡಲಾಗುತ್ತದೆ. 

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಮೃತದೇಹವನ್ನು ಕೊನೆಯ ಕ್ಷಣದಲ್ಲಿ ನೋಡಬೇಕೆಂಬ ಆಸೆ ಮೃತರ ಕುಟುಂಬದವರಿಗೆ ಇರುತ್ತದೆ, ಮೃತರ ಸಂಬಂಧಿಕರು, ಮಕ್ಕಳು ಬೇರೆ ಬೇರೆ ದೇಶ, ರಾಜ್ಯಗಳಲ್ಲಿದ್ದರೆ ಬರುವುದು ತಡವಾಗುತ್ತದೆ, ಮೃತಪಟ್ಟ ನಂತರ ಸಾಮಾನ್ಯವಾಗಿ ದೇಹವು ಕ್ರಮೇಣ ವಾಸನೆ ಬರಲು ಶುರುವಾಗುತ್ತದೆ, ಆದರೆ, ಆಗ ಮೃತ ದೇಹವು ಹಾಳಾಗುವುದಿಲ್ಲ, ವಾಸನೆ ಕೂಡ ಬರುವುದಿಲ್ಲ. ಅಂತ್ಯಕ್ರಿಯೆ ವಿಳಂಬವಾದಾಗ ಫ್ರೀಜರ್‌ ಬಾಕ್ಸ್ ಪೂರಕವಾಗುತ್ತದೆ, ಇದರಲ್ಲಿ 24 ಗಂಟೆಯಿಂದ 48 ಗಂಟೆಗಳ ಕಾಲ ಇಡಬಹುದುದಾಗಿದೆ, ಇನ್ನೂ ಹೆಚ್ಚಿನ ದಿನಗಳ ಕಾಲ ಇಡಬೇಕಾದರೆ ಫೊರೆನ್ಸಿಕ್‌ ಲ್ಯಾಬ್‌ನಲ್ಲಿಡಬಹುದಾಗಿದೆ. – 2 ರಿಂದ -30 ಡಿಗ್ರಿ ಉಷ್ಣಾಂಶವಿರುತ್ತದೆ, ಸಾಮಾನ್ಯವಾಗಿ ಫ್ರೀಜರ್‌ ಬಾಕ್‌ರ‍ಸ 7 ಅಡಿ ಉದ್ದ, 4 ಅಡಿ ಅಗಲ, 3 ಅಡಿ ಎತ್ತರ ಇರುತ್ತದೆ, ಅಲ್ಲದೇ 80 ರಿಂದ 100 ಕೆಜಿ ತೂಕವಿರುತ್ತದೆ. ಈ ಬಾಕ್‌ರ‍ಸನ್ನು 2 ರಿಂದ 8 ಡಿಗ್ರಿ ಉಷಾಂಶದಲ್ಲಿ ನಿರ್ವಹಣೆ ಮಾಡಲಾಗುತ್ತದೆ. 

ಈ ಸಂದರ್ಭ ಭಾವಸಾರ ವಿಜನ್‌ ಇಂಡಿಯಾ ಪ್ರೇರಣಾ ಶಿವಮೊಗ್ಗ ಶಾಖೆಯ ಅಧ್ಯಕ್ಷರಾದ ಮಿಥುನ್‌ ಉತ್ತರಕರ್‌ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ಅಪರೂಪದ ಪ್ರಾಜೆಕ್ಟ್ ಆಗಿದೆ. ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಇಂತದೊಂದು ಸೇವೆ ಜನರಿಗೆ ದೊರಕಲಿದೆ. ಇದರ ಜೊತೆಗೆ ಭಾವಸಾರ ವಿಜನ್‌ ಇಂಡಿಯಾ ಬಿವಿಐ ಪ್ರೇರಣಾ ಶಾಖೆಯು 2015ಲ್ಲಿ ಅಸ್ತಿತ್ವಕ್ಕೆ ಬಂದಿದೆ. ನಾರಾಯಣ ರಾವ್‌ತಾತಸ್ಕರ್‌ ಅವರು ಭಾವಸಾರ ವಿಜನ್‌ ಇಂಡಿಯಾದ ಸಂಸ್ಥಾಪಕರು, ಪ್ರತಿ ವರ್ಷವೂ ನಾನಾ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. 2017ರಲ್ಲಿ ರೋಟರಿ ಚಿತಾಗಾರಕ್ಕೆ ಪ್ರೇರಣಾ ಸಂಸ್ಥೆ ವತಿಯಿಂದ ಎರಡು ಒಲೆಗಳನ್ನು ನೀಡಲಾಗಿದೆ. ರಕ್ತದಾನ ಶಿಬಿರ, ಬಡ ಕುಟುಂಬಗಳಿಗೆ ರೇಷನ್‌ ಕಿಟ್‌ ಹಂಚಿಕೆ, ಅನಾಥಾಶ್ರಮಗಳಿಗೆ ಅಕ್ಕಿ, ಬಟ್ಟೆ , ಹೊದಿಕೆ ವಿತರಣೆ, ಉಚಿತ ಹೆಲ್ತ್ ಕ್ಯಾಂಪ್‌, ಓದುವ ಶಾಲಾ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ ವಿತರಣೆ, ಅನುದಾನಿತ ಶಾಲೆಗಳಿಗೆ ಕ್ರೀಡಾ ಸಾಮಾಗ್ರಿ ವಿತರಣೆ, ಅಂಗನವಾಡಿ ಕೇಂದ್ರಗಳಿಗೆ ಆಟದ ಸಾಮಾಗ್ರಿ ವಿತರಣೆ, ಹೀಗೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ನಮ್ಮ ಸಂಸ್ಥೆ ಕಳೆದ ಎಂಟು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಸಂಸ್ಥೆಯು ಮುಂದಿನ ದಿನಗಳಲ್ಲಿಯೂ ಸಮಾಜಸೇವೆ ಶ್ರಮಿಸಲಿದೆ ಎಂದು ಹೇಳಿದರು.

ಈ ಸಂದರ್ಭ ಡಾ.ಧನಂಜಯ ಸರ್ಜಿ ಮಾತನಾಡಿ, ಇದೊಂದು ಮಾನವೀಯ ಕಾಳಜಿಯುಳ್ಳ ಒಂದು ಅಪರೂಪದ ಕಾರ್ಯಕ್ರಮ. ಭಾವಸಾರ ವಿಜನ್‌ ಇಂಡಿಯಾ ಪ್ರೇರಣಾದ ಮೂಲಕ ಸರ್ಜಿ ಫೌಂಡೇಷನ್‌ಗೆ ಸೇವೆ ಮಾಡುವ ಅವಕಾಶ ನೀಡಿದೆ. ಸರ್ಜಿ ಫೌಂಡೇಷನ್‌ ಕೂಡ ಪರಿಸರ ಪೂರಕ ಹಾಗೂ ಉಚಿತ ಆರೋಗ್ಯ ತಪಾಸಣೆಯಂತಹ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳುತ್ತಿದೆ. ಇದೀಗ ಇದರ ನಿರ್ವಹಣೆಯನ್ನು ವಹಿಸಿಕೊಂಡಿದ್ದು, ಸೇವಾಮನೋಭಾವನೆಯೊಂದಿಗೆ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು ಎಂದರು. 

ಪತ್ರಿಕಾಗೋಷ್ಟಿಯಲ್ಲಿ ಸರ್ಜಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಮೆಡಿಕಲ್‌ ಸೂಪರಿಂಡೆಂಟ್‌ ವಾದಿರಾಜ್‌ ಕುಲಕರ್ಣಿ, ಇನರ‍ಸೆಂಟಿವಿಸ್ಟ್ ಡಾ.ಸತೀಶ್‌, ಡಾ.ಚಂದ್ರಶೇಖರ್‌, ಭಾವಸಾರ ವಿಜನ್‌ ಇಂಡಿಯಾ ಪ್ರೇರಣಾ ಶಾಖೆಯ ಕಾರ್ಯದರ್ಶಿ ಯಶ್ವಂತ್‌ ಅಂಬೋರೆ ಹಾಗೂ ಪದಾಧಿಕಾರಿಗಳಾದ ವೆಂಕಟೇಶ್‌, ಪ್ರದೀಪ್‌, ಸಾವನ್‌, ವಿಜಯ್‌‍, ಚಂದನ್‌, ಕಾರ್ತಿಕ್‌ ಮತ್ತಿತರರು ಹಾಜರಿದ್ದರು.

ಸಂಪರ್ಕ ಸಂಖ್ಯೆ : 8884356688, 8884377488

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.