ಯುವಜನತೆಯ ಕಣ್ಣಿಗೆ ಮಣ್ಣೆರುಚುವ ಕಾರ್ಯಕ್ರಮವನ್ನ ಕಾಂಗ್ರೆಸ್ ಮಾಡಿದೆ ! ಯುವನಿಧಿ ಯೋಜನೆಗೆ ಬಿ ವೈ ರಾಘವೇಂದ್ರ ಟೀಕೆ !

ಯುವಜನತೆಯ ಕಣ್ಣಿಗೆ ಮಣ್ಣೆರುಚುವ ಕಾರ್ಯಕ್ರಮವನ್ನ ಕಾಂಗ್ರೆಸ್ ಮಾಡಿದೆ ! ಯುವನಿಧಿ ಯೋಜನೆಗೆ ಬಿ ವೈ ರಾಘವೇಂದ್ರ ಟೀಕೆ !

ಶಿವಮೊಗ್ಗ : ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ಕಾರ್ಯಕ್ರಮ ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಶುಕ್ರವಾರ ನೆರವೇರಿದೆ. ಯುವನಿಧಿ ಕಾರ್ಯಕ್ರಮವು ರಾಜ್ಯದ ಯುವಜನತೆಯ ಕಣ್ಣಿಗೆ ಮಣ್ಣೆರಚುವ ತಂತ್ರ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಭರವಸೆ ನೀಡಿತ್ತು.

ಗ್ಯಾರಂಟಿ ಅಲೆಯ ಮೇಲೆ ಅಧಿಕಾರಕ್ಕೆ ಕಾಂಗ್ರೆಸ್ ಬಂದಿತ್ತು. ಈಗ ನಿಯಮಗಳನ್ನು ಹೇರುತ್ತಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಮಲೆನಾಡಿನ ಶೈಕ್ಷಣಿಕ, ಮನೋರಂಜನೆ, ಅಪರಾಧ, ಅಪಘಾತ ಮತ್ತು ರಾಜಕೀಯದ ಕ್ಷಣ ಕ್ಷಣದ ಸುದ್ದಿ ಮಾಹಿತಿಗಾಗಿ ಶಿವಮೊಗ್ಗ ಎಕ್ಸ್ ಪ್ರೆಸ್ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಲೂ ಐದಾರು ಯುನಿವರ್ಸಿಟಿಯ ಮಕ್ಕಳಿಗೆ ಈ ಸೌಲಭ್ಯ ಸಿಗಲ್ಲ. ನಿರುದ್ಯೋಗಿಗಳ ಮತ ಪಡೆದು ಈಗ ಎಪಿಎಲ್, ಬಿಪಿಎಲ್ ಎನ್ನುತ್ತಿದ್ದಾರೆ. ಯುವಕರಿಗೆ, ಮತದಾರರಿಗೆ ದ್ರೋಹ ಮಾಡುವ ಕೆಲಸವಾಗುತ್ತಿದೆ. ಲೋಕಸಭಾ ಚುನಾವಣೆಯನ್ನು ಮುಂದೆ ಇಟ್ಟುಕೊಂಡು ಯುವಕರನ್ನು ಮರಲು ಮಾಡುತ್ತಿದ್ದಾರೆ. ಕಂಡಿಷನ್ ಹಾಕಿ ಸಂಖ್ಯೆ ಕಡಿಮೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣಾ ಮುಗಿದ ಮೇಲೆ ಈ ಗ್ಯಾರಂಟಿ ಮುಂದುವರೆಯಲ್ಲ. ಯುವಕರಿಗೆ ಭರವಸೆ ಕೊಟ್ಟ ರೀತಿ ನಡೆದುಕೊಳ್ಳಬೇಕಿತ್ತು ಎಂದರು.

ಕೇಂದ್ರ ವಿಶ್ವಕರ್ಮ ಯೋಜನೆಯ ಮೂಲಕ‌ 13 ಸಾವಿರ ಕೋಟಿಯ ಯೋಜನೆ ನೀಡಿದ್ದಾರೆ. ಗ್ಯಾರಂಟಿಗಳ ಮೂಲಕ ಹಣ ದುರುಪಯೋಗವಾಗುತ್ತಿದೆ. ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ನಿಂತು ಹೋಗಿದೆ. ನಿಷ್ಕ್ರಿಯ ಸರ್ಕಾರ ಯುವಕರಿಗೆ ಮೋಸ ಮಾಡಿದೆ ಎಂದು ರಾಘವೇಂದ್ರ ದೂರಿದರು.

ನಾನೇ ಫ್ರೀಡಂ ಪಾರ್ಕ್ ಮಾಡಿಸಿದ್ದೆಂದು ಸಿಎಂ ಹೇಳಿದ್ದಾರೆ. ಅವರಿಗೆ ತಪ್ಪು ಮಾಹಿತಿ ಇರಬೇಕು. ಫ್ರೀಡಂ ಪಾರ್ಕ್ ಅಭಿವೃದ್ಧಿ ಪಡಿಸಿದ್ದು ಯಡಿಯೂರಪ್ಪನವರು. 48 ಗಂಟೆಯಲ್ಲಿ ಆದೇಶ ಮಾಡಿ ನಮ್ಮ ಸರ್ಕಾರ ಅಭಿವೃದ್ಧಿಪಡಿಸಿದೆ. 2019ರಲ್ಲಿಯೇ ಅಲ್ಲಮಪ್ರಭುಗಳ ಹೆಸರು ಇಡಲು ಸುತ್ತೂರು ಶ್ರೀಗಳು ಹೇಳಿದ್ದರು. ಆ ಸಭೆಯಲ್ಲಿ ಯಡಿಯೂರಪ್ಪನವರು ಸಹ ಇದ್ದರು. ಫ್ರೀಡಂ ಪಾರ್ಕ್ ಗೆ ಅಲ್ಲಮಪ್ರಭು ಹೆಸರು ಇಡುವುದು ಸೂಕ್ತ ಇದೆ ಎಂದರು.

ವರದಿ : ಲಿಂಗರಾಜ್ ಗಾಡಿಕೊಪ್ಪ 


Leave a Reply

Your email address will not be published.