ಬೆಜ್ಜವಳ್ಳಿ ಜಾತ್ರೆಯಲ್ಲಿ ಅಕ್ರಮ ಅಂದರ್ ಬಾಹರ್ ಆಟ ! ಸ್ಥಳೀಯರ ಆಕ್ರೋಶದ ಬೆನ್ನಲ್ಲೇ ದಾಳಿ ನಡೆಸಿದ ಪೊಲೀಸರು !
ಶಿವಮೊಗ್ಗ : ಶಿವಮೊಗ್ಗದ ಬೆಜ್ಜವಳ್ಳಿಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಜಾತ್ರೆಯಲ್ಲಿ ನೂರಾರು ಕಡೆಗಳಿಂದ ಬಂದಿರುವ ಜನತೆ ಸಾಗಾರೋಪಾದಿಯಲ್ಲಿ ಸೇರಿದ್ದಾರೆ, ಇದರ ನಡುವೆ ಬಹಿರಂಗವಾಗಿ ಬೆಜ್ಜವಳ್ಳಿಯಲ್ಲಿ ಅಕ್ರಮ ಅಂದರ್ ಬಾಹರ್ ಆಟ ನಡೆಯುತ್ತಿತ್ತು.
ಬೆಜ್ಜವಳ್ಳಿಯ ಜಾತ್ರೆಯಲ್ಲಿ ಸರಿಸುಮಾರು ಎಂಟು ಸ್ಟಾಲ್ ಗಳಲ್ಲಿ ಬಹಿರಂಗವಾಗಿ ಅಕ್ರಮ ಅಂಧರ್ ಬಾಹರ್ ಆಡಿಸುತಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು, ಇದನ್ನು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ನೂ ವೈರಲ್ ವಿಡಿಯೋ ಶಿವಮೊಗ್ಗ ಎಸ್.ಪಿ ಜಿ ಕೆ ಮಿಥುನ್ ಕುಮಾರ್ ಅವರ ಗಮನಕ್ಕೂ ಬಂದಿತ್ತು, ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಮಾಳುರೂ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ ಸ್ಟಾಲ್ ಗಳನ್ನು ತೆರೆವುಗೊಳಿಸಿದ್ದಾರೆ. ಈ ಸಂಬಂಧ ಹಲವರ ಮೇಲೆ ಕೇಸ್ ದಾಖಲಿಸಿದ್ದು. ಯಾರು ಇಸ್ಪೀಟ್ ಆಡಿಸುತ್ತಿದ್ದರು ಎಂಬುವರ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.
ವರದಿ : ಲಿಂಗರಾಜ್ ಗಾಡಿಕೊಪ್ಪ
Leave a Reply